ಕಲಬುರಗಿ :ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ನಡೆದಿದೆ. ಕಡಗಂಚಿ ಗ್ರಾಮದ ನಿವಾಸಿ ನಿರ್ಮಲಾ ಸಾತಲಿಂಗಪ್ಪ ಎಂಬುವರ ಮೇಲೆ ಅದೇ ಗ್ರಾಮದ ನಾಗರಾಜ ವಾಣಿ ಎಂಬಾತ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ 2ನೇ ಗುಂಡು ನೇರವಾಗಿ ನಿರ್ಮಲಾ ಭುಜಕ್ಕೆ ತಗುಲಿದೆ. ನಿರ್ಮಲಾ ಅವರ ಬಲ ಭುಜಕ್ಕೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.