ಕಲಬುರಗಿ:ಒಳಚರಂಡಿಯ ಮ್ಯಾನ್ಹೋಲ್ ದುರಸ್ತಿಗೆ ಇಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮ್ಯಾನ್ಹೋಲ್ನಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಕೈಲಾಸನಗರ ಬಡಾವಣೆಯಲ್ಲಿ ನಡೆದದೆ.
ಲಾಲ್ ಅಹ್ಮದ್ (25) ಮತ್ತು ರಶೀದ್ (30) ಮೃತ ಕಾರ್ಮಿಕರು. ಕೈಲಾಶ್ ನಗರದಲ್ಲಿ ಬ್ಲಾಕ್ ಆಗಿದ್ದ ಡ್ರೈನೇಜ್ ಕ್ಲೀಯರ್ ಮಾಡಲು ಓರ್ವ ಗುತ್ತಿಗೆ ನೌಕರ 18 ಅಡಿ ಆಳಕ್ಕೆ ಇಳಿದಿದ್ದಾನೆ. ಡ್ರೈನೇಜ್ ಒಳಗಡೆ ಉಸಿರುಗಟ್ಟಿ ಒದ್ದಾಡುತ್ತಿರುವಾಗ ಆತನನ್ನು ರಕ್ಷಿಸಲು ಮತ್ತಿಬ್ಬರು ನೌಕರರು ಇಳಿದಿದ್ದಾರೆ. ಮ್ಯಾನ್ ಹೋಲ್ ಇಕ್ಕಟ್ಟಾಗಿದ್ದರಿಂದ ಲಾಲ್ ಅಹ್ಮದ್ ಮತ್ತು ರಶೀದ್ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮ್ಯಾನ್ಹೋಲ್ ದುರಂತ: ಇಬ್ಬರು ಕಾರ್ಮಿಕರು ಸಾವು ಮತ್ತೋರ್ವ ರಾಜು ಎನ್ನುವ ಕಾರ್ಮಿಕ ತೀವ್ರ ಅಸ್ವಸ್ಥಗೊಂಡಿದ್ದ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಜೆಸಿಬಿ ಮೂಲಕ ಮ್ಯಾನ್ ಹೋಲ್ ಸ್ಥಳ ಅಗೆದು ಮೃತದೇಹಗಳನ್ನ ಹೊರತೆಗೆದಿದ್ದಾರೆ. ಗಂಭೀರವಾಗಿ ಅಸ್ವಸ್ಥಗೊಂಡಿರುವ ನೌಕರ ರಾಜುನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಮಕ್ಕಳು ಬಲಿಯಾಗಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಯಂತ್ರಗಳಿಂದ ಮ್ಯಾನ್ ಹೋಲ್ ಕ್ಲೀನ್ ಮಾಡಬೇಕು ಅನ್ನೋ ನಿಯಮಗಳಿದ್ರು ಯಾವುದೇ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದೆ ಮ್ಯಾನ್ ಹೋಲ್ ಕ್ಲೀನ್ ಮಾಡಲು ಕಾರ್ಮಿಕರನ್ನು ಬಳಸಲಾಗಿದೆ. ಅಧಿಕಾರಿಗಳು, ಗುತ್ತಿಗೆದಾರನ ಬೇಜವಾಬ್ದಾರಿ, ನಿರ್ಲಕ್ಷ್ಯಕ್ಕೆ ಕಾರ್ಮಿಕರು ಬಲಿಯಾಗಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಮೃತ ಕಾರ್ಮಿರ ಸಾವಿಗೆ ನ್ಯಾಯ, ಪರಿಹಾರ ಸಿಗಬೇಕು. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರನಿಗೆ ಶಿಕ್ಷೆಯಾಗಬೇಕು ಎಂದು ಜಿಮ್ಸ್ ಆಸ್ಪತ್ರೆ ಮುಂಭಾಗದ ರಸ್ತೆ ಬಂದ್ ಮಾಡಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಸ್ಥರಿಗೆ ದಲಿತ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಸಾಥ್ ನೀಡಿವೆ.
ಐವರ ವಿರುದ್ಧ ಎಫ್.ಐ.ಆರ್:ಮ್ಯಾನ್ಹೋಲ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ಗಳಾದ ಬಿಲಗುಂದಿ, ನರಸಿಂಹ ರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಸ್.ಪಾಟೀಲ, ಗುತ್ತಿಗೆದಾರ ಶಫಿ ಹಾಗೂ ಸೂಪರ್ ವೈಜರ್ ವಿಜಯಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.