ಕರ್ನಾಟಕ

karnataka

ETV Bharat / state

ಹಣಕ್ಕಾಗಿ ಕಲಬುರಗಿಯಲ್ಲಿ ಅಡತಿ ಮಾಲೀಕನ ಕಿಡ್ನಾಪ್: 24 ಗಂಟೆಯಲ್ಲೇ ಆರೋಪಿಗಳು ಅಂದರ್​

ಅಡತಿ ಮಾಲೀಕ ಹನುಮಂತರಾಯ್ ಮಾಲಿಪಾಟೀಲ್ ಎಂಬುವರನ್ನು ಆರೋಪಿಗಳು ಹಣದ ವಿಚಾರವಾಗಿ ಥಳಿಸಿದ್ದರಲ್ಲದೆ, ಕಳೆದ 13ರಂದು ಅಪಹರಿಸಿದ್ದರು. 24 ಗಂಟೆಯಲ್ಲಿ ಕಲಬುರಗಿಯ ಚೌಕ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

The arrest of the accused within 24 hours of the kidnapping of a person in Kalaburagi
ಅಡತಿ ಮಾಲಿಕನ ಕಿಡ್ನಾಪ್ ಮಾಡಿದ್ದ ಆರೋಪಿಗಳ ಬಂಧನ

By

Published : Nov 15, 2020, 10:11 AM IST

ಕಲಬುರಗಿ: ಹಣಕ್ಕಾಗಿ ಅಡತಿ ಮಾಲೀಕನನ್ನು ಕಿಡ್ನಾಪ್ ಮಾಡಿದ ಆರೋಪಿಗಳನ್ನು ಕೇವಲ 24ಗಂಟೆಯಲ್ಲಿ ಕಲಬುರಗಿಯ ಚೌಕ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಎಪಿಎಂಸಿ ನೆಹರು ಗಂಜ್ ಪ್ರದೇಶದಲ್ಲಿನ ಅಡತಿ(ಖರೀದಿ ಕೇಂದ್ರ) ಮಾಲೀಕ ಹನುಮಂತರಾಯ್ ಮಾಲಿಪಾಟೀಲ್ ಎಂಬುವರನ್ನು ಆರೋಪಿಗಳು ಹಣದ ವಿಚಾರವಾಗಿ ಥಳಿಸಿದರಲ್ಲದೆ, ಕಳೆದ 13ರಂದು ಅಪಹರಿಸಿಕೊಂಡು ಹೋಗಿದ್ದರು. ಈ ಬಗ್ಗೆ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಕೇವಲ 24 ಗಂಟೆಯೊಳಗೆ ಬಾಗಲಕೋಟೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಖಾಜಾಹುಸೇನ್, ಸಿರಾಜುದ್ದೀನ್, ಮಹಮ್ಮದ್ ಯೂನಸ್, ಮೊಹಮ್ಮದ್ ಜಾವಿದ್, ಎಂ ಡಿ ಅಫೀಸ್ ಬಂಧಿತರು. ಆರೋಪಿಗಳೆಲ್ಲರೂ ಜೇವರ್ಗಿ ಮೂಲದವರಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದೆ ಹಾಗೂ ಅಪಹರಣಕ್ಕೊಳಗಾಗಿದ್ದ ಅಡತಿ ಮಾಲೀಕ ಹನುಮಂತರಾಯ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್ ಸತೀಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details