ಕಲಬುರಗಿ: ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಚಿಂಚೋಳಿ ತಾಲೂಕಿನ ಸುಲೇಪೇಟ ಠಾಣೆ ಪಿ.ಎಸ್.ಐ. ತಿಮ್ಮಯ್ಯ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದಾರೆ.
ಪೋತಂಗಲ್ ವಕೀಲನ ಹತ್ಯೆ ಪ್ರಕರಣ: ಕರ್ತವ್ಯ ಲೋಪದ ಆರೋಪದ ಮೇಲೆ ಪಿಎಸ್ಐ ಅಮಾನತು - ಸುಲೇಪೇಟ ಠಾಣೆ ಪಿಎಸ್ಐ ಅಮಾನತ್ತು ಸುದ್ದಿ
ಚಿಂಚೋಳಿ ತಾಲೂಕಿನ ಪೋತಂಗಲ್ ನಲ್ಲಿ ಕಳೆದ ಗುರುವಾರ ಉದ್ಯೋಗ ಖಾತ್ರಿಗೆ ಸಂಬಂಧಿಸಿ ಡಂಗೂರ ಸಾರಿದ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಜಗಳ ಬಿಡಿಸಲು ಹೋಗಿದ್ದ ವಕೀಲ ನಾರಾಯಣರೆಡ್ಡಿ ಪಾಟೀಲ್ ಅವರ ಮೇಲೆ ತೀವ್ರ ಹಲ್ಲೆ ಮಾಡಲಾಗಿತ್ತು.

ಸುಲೇಪೇಟ ಠಾಣೆ ಪಿಎಸ್ಐ ಅಮಾನತ್ತು
ಚಿಂಚೋಳಿ ತಾಲೂಕಿನ ಪೋತಂಗಲ್ ನಲ್ಲಿ ಕಳೆದ ಗುರುವಾರ ಉದ್ಯೋಗ ಖಾತ್ರಿಗೆ ಸಂಬಂಧಿಸಿ ಡಂಗೂರ ಸಾರಿದ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಜಗಳ ಬಿಡಿಸಲು ಹೋಗಿದ್ದ ವಕೀಲ ನಾರಾಯಣರೆಡ್ಡಿ ಪಾಟೀಲ್ ಅವರ ಮೇಲೆ ತೀವ್ರ ಹಲ್ಲೆ ಮಾಡಲಾಗಿತ್ತು.
ಹಲ್ಲೆಗೊಳಗಾಗಿದ್ದ ನಾರಾಯಣರೆಡ್ಡಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು. ನಾರಾಯಣರೆಡ್ಡಿ ಪಾಟೀಲ ಕೊಲೆ ಪ್ರಕರಣವನ್ನು ಸರಿಯಾಗಿ ನಿರ್ವಹಿಸದೆ ಕರ್ತವ್ಯ ಲೋಪ ವೆಸಗಿದ್ದಾರೆಂಬ ಆರೋಪದ ಹಿನ್ನೆಲೆ ಪಿ.ಎಸ್.ಐ. ಅವರನ್ನು ಅಮಾನತುಗೊಳಿಸಿ ಎಸ್.ಪಿ. ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದಾರೆ.