ಕಲಬುರಗಿ: ನಗರದಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಆರಂಭವಾಗಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಮೂವರು ಕಂದಮ್ಮಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಗರದ ವಾರ್ಡ್ ಸಂಖ್ಯೆ 2 ಝಬೇರ ಕಾಲೋನಿಯಲ್ಲಿ ನಡೆದಿದೆ.
ಕಲಬುರಗಿಯಲ್ಲಿ ಬೀದಿನಾಯಿಗಳ ಹಾವಳಿ: ಮೂವರು ಮಕ್ಕಳಿಗೆ ಗಾಯ
ನಗರದ ವಾರ್ಡ್ ಸಂಖ್ಯೆ 2 ಝಬೇರ ಕಾಲೋನಿಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳಿಂದ ದಾಳಿ. ಮೂವರು ಮಕ್ಕಳಿಗೆ ಗಾಯ.
ಮಹಮ್ಮದ್ ಫೈಸಲ್ (4), ಮಹಮ್ಮದ್ ಸಮೀವುಲ್ಲಾ(4), ಮಹಮ್ಮದ್ ಜಾಹಿದ್ (5) ಗಾಯಗೊಂಡಿರುವ ಮಕ್ಕಳು. ನಗರದಲ್ಲಿರುವ ಝಬೇರ ಕಾಲೋನಿಯಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆ ಬೀದಿನಾಯಿಗಳು ದಾಳಿ, ಮಕ್ಕಳ ಮುಖ, ಕೈ ,ಕಾಲು ಸೇರಿ ದೇಹದ ಹಲವೆಡೆ ಕಚ್ಚಿ ಗಾಯಗೊಳಿಸಿವೆ. ಗಾಯಾಳು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಿಲ್ಲೆಯಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಇದನ್ನು ತಡೆಯುವಲ್ಲಿ ವಿಫಲರಾಗಿರುವ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿನಾಯಿಗಳ ಸ್ಥಳಾಂತರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.