ಕಲಬುರಗಿ: ಕೊರೊನಾ ಭೀತಿ ಹಿನ್ನೆಲೆ ನವ ಜೋಡಿ ಡಾ. ಅಂಬೇಡ್ಕರ್ ಸಾಕ್ಷಿಯಾಗಿ ಸರಳವಾಗಿ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಶಹಬಾದ ನಿವಾಸಿ, ಖಾಸಗಿ ಬ್ಯಾಂಕ್ ನೌಕರ ಚಂದ್ರಕಾಂತ ಮ್ಯಾಗೇರಿ ಹಾಗೂ ಜಗತ್ ಭೀಮ ನಗರ ಬಡಾವಣೆಯ ಸುಹಾಸಿನಿ ಪುಟಗಿ ಈ ಇಬ್ಬರು ನಗರದ ಜಗತ್ ವೃತ್ತದ ಅಂಬೇಡ್ಕರ್ ಪುತ್ಥಳಿ ಎದುರು ಪರಸ್ಪರ ಹಾರ ಬದಲಾಯಿಸಿಕೊಂಡು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಂಬೇಡ್ಕರ್ ಸಾಕ್ಷಿಯಾಗಿ ಸರಳವಾಗಿ ಮದುವೆಯಾದ ಜೊಡಿ ಇವರಿಬ್ಬರ ಮದುವೆಯನ್ನು ಬುದ್ದ ಪೂರ್ಣಿಮೆ ದಿನವಾದ ಇಂದು ಆಡಂಬರದಿಂದ ಮಾಡಲು ಗುರು ಹಿರಿಯರು ನಿಶ್ಚಯಿಸಿದ್ದರು. ಆದ್ರೆ ಕೊರೊನಾ ಭೀತಿ ಹಿನ್ನಲೆ ಇಂದು ಜೈ ಭೀಮ ಸೇನಾ ಸೇವಾ ಸಂಘದ ನೇತೃತ್ವದಲ್ಲಿ ಸರಳವಾಗಿ ಮದುವೆ ಮಾಡಲಾಯಿತು.
ಬೌದ್ಧ ಧರ್ಮದ ವಿಧಿ-ವಿಧಾನದಂತೆ ನಡೆದ ಮದುವೆಯಲ್ಲಿ ವರನ ಕುಟುಂಬದ 10 ಜನ, ವಧುವಿನ ಕುಟುಂಬದ 10 ಜನ, ಸ್ನೇ ಹಿತರು, ಬಡಾವಣೆ ನಿವಾಸಿಗಳು ಸೇರಿ ಒಟ್ಟು 30 ಜನರು ಭಾಗಿಯಾಗಿ ನವ ಜೋಡಿಗೆ ಹರಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಹ್ಯಾಂಡ್ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿದ್ದು ವಿಶೇಷವಾಗಿತ್ತು. ಮದು ಮಕ್ಕಳು ಸಹ ಮಾಸ್ಕ್, ಗ್ಲೌಸ್ ಧರಿಸಿದ್ದರು.