ಕಲಬುರಗಿ: ಶ್ರೀರಾಮಲು ತಾವು ಸಚಿವರಾಗಿದ್ದರೂ ರಾಜ್ಯದಲ್ಲಿ ಎಲ್ಲೇ ಇದ್ದರೂ ನಿತ್ಯ ಮುಂಜಾನೆ ಇಷ್ಟಲಿಂಗ ಪೂಜೆ ಮಾಡುವುದನ್ನು ಮಾತ್ರ ಮರೆಯುವುದಿಲ್ಲ. ಗುರುವಾರ ರಾತ್ರಿ ಕಲಬುರಗಿಯ ಕ್ರಿಶ್ಚಿಯನ್ವೊಬ್ಬರ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಶ್ರೀರಾಮಲು, ಬೆಳಗೆದ್ದು ಅವರ ಮನೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಗಮನ ಸೆಳೆದಿದ್ದಾರೆ.
ತಾವು ವಾಸ್ತವ್ಯ ಹೂಡಿದ್ದ ಕ್ರಿಶ್ಚಿಯನ್ನರ ಮನೆಯಲ್ಲಿ ಇಷ್ಟಲಿಂಗ ಪೂಜೆ ನೆರೆವೇರಿಸಿದ ಶ್ರೀರಾಮಲು - ಕಲಬುರಗಿ ಜಿಲ್ಲೆ ಸುದ್ದಿ
ಕ್ರಿಶ್ಚಿಯನ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಶ್ರೀರಾಮು ಅವರು ಬೆಳಗ್ಗೆದ್ದು ಅದೇ ಮನೆಯಲ್ಲಿ ಇಷ್ಟಲಿಂಗ ಪೂಜೆ ನೇರವೇರಿಸಿದರು.
ಇಷ್ಟಲಿಂಗ ಪೂಜೆ ನೆರೆವೇರಿಸಿದ ಶ್ರೀರಾಮಲು
ಬಿಜೆಪಿ ಮುಖಂಡ ರಾಜು ವಾಡೇಕರ್ ಅವರ ಪುತ್ರ ರಾಕೇಶ್ ವಾಡೆಕರ್ ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಆಗಮಿಸಿದ್ದರು. ಗುರುವಾರ ರಾತ್ರಿ ಕಲಬುರಗಿಗೆ ಆಗಮಿಸಿದ ಅವರು, ನಗರದ ಹೊರವಲಯ ಸಿರನೂರ ಹತ್ತಿರದ ಕ್ರಿಶ್ಚಿಯನ್ ಸಮುದಾಯದ ಆರ್ಗೆಲ್ ವರ್ಗಿಸ್ ಅವರ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಪೂಜೆ ವೇಳೆ ಇಬ್ಬರು ಅರ್ಚಕರು ಸಚಿವರೊಂದಿಗೆ ಇದ್ದರು.