ಸೇಡಂ :ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ರಾಜ್ಯ ಚುನಾವಣಾ ಆಯೋಗ, ತಾಲೂಕು ಆಡಳಿತದ ವತಿಯಿಂದ ನಡೆದ ಸಭೆಯಲ್ಲಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ನಿಗದಿ ಮಾಡಲಾಯಿತು.
ಸೇಡಂ; 27 ಗ್ರಾ.ಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ
ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ರಾಜ್ಯ ಚುನಾವಣಾ ಆಯೋಗ, ತಾಲೂಕು ಆಡಳಿತದ ವತಿಯಿಂದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸುವ ಸಭೆಯಲ್ಲಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳಿಗೆ ಮೀಸಲಾತಿ ನಿಗದಿ ಮಾಡಲಾಯಿತು.
ಜಿಲ್ಲಾಧಿಕಾರಿ ವಿಜಯಾ ಜ್ಯೋತ್ಸ್ನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲ ಗ್ರಾಮ ಪಂಚಾಯಿತಿಗಳನ್ನು ಲಾಟರಿ ಮೂಲಕ ಮತ್ತು ಇನ್ನುಳಿದವರನ್ನು ಕೇಂದ್ರ ಸರ್ಕಾರದ ಆ್ಯಪ್ ಮೂಲಕ ಆಯ್ಕೆ ಮಾಡಲಾಯಿತು.
ಗ್ರಾ.ಪಂ ಹೆಸರು | ಅಧ್ಯಕ್ಷ ಸ್ಥಾನ | ಉಪಾಧ್ಯಕ್ಷ ಸ್ಥಾನ |
ಬೆನಕನಹಳ್ಳಿ | ಪ್ರವರ್ಗ-1 ಮಹಿಳೆ | ಎಸ್ಸಿ |
ಯಡಗಾ | ಪ್ರವರ್ಗ-1 ಮಹಿಳೆ | ಎಸ್ಸಿ |
ಕಾನಾಗಡ್ಡಾ | ಪ್ರವರ್ಗ-ಬಿ | ಎಸ್ಸಿ ಮಹಿಳೆ |
ಇಟಕಾಲ | ಸಾಮಾನ್ಯ | ಸಾಮಾನ್ಯ ಮಹಿಳೆ |
ಕುಕ್ಕುಂದಾ | ಸಾಮಾನ್ಯ | ಎಸ್ಸಿ ಮಹಿಳೆ |
ಚಂದಾಪೂರ | ಸಾಮಾನ್ಯ | ಎಸ್ಸಿ ಮಹಿಳೆ |
ತೇಲ್ಕೂರ | ಸಾಮಾನ್ಯ | ಸಾಮಾನ್ಯ ಮಹಿಳೆ |
ಮದಕಲ | ಸಾಮಾನ್ಯ | ಸಾಮಾನ್ಯ ಮಹಿಳೆ |
ರಂಜೋಳ | ಸಾಮಾನ್ಯ | ಎಸ್ಟಿ ಮಹಿಳೆ |
ಲಿಂಗಂಪಲ್ಲಿ | ಸಾಮಾನ್ಯ | ಎಸ್ಟಿ ಮಹಿಳೆ |
ಸಿಂಧನಮಡು | ಸಾಮಾನ್ಯ | ಎಸ್ಟಿ ಮಹಿಳೆ |
ಆಡಕಿ | ಸಾಮಾನ್ಯ ಮಹಿಳೆ | ಪ್ರವರ್ಗ-ಬಿ |
ಕೋಡ್ಲಾ | ಸಾಮಾನ್ಯ ಮಹಿಳೆ | ಸಾಮಾನ್ಯ |
ದುಗನೂರು | ಸಾಮಾನ್ಯ ಮಹಿಳೆ | ಎಸ್ಸಿ |
ಮಳಖೇಡ | ಸಾಮಾನ್ಯ ಮಹಿಳೆ | ಎಸ್ಸಿ |
ಮುಧೋಳ | ಸಾಮಾನ್ಯ ಮಹಿಳೆ | ಸಾಮಾನ್ಯ |
ಮೋತಕಪಲ್ಲಿ | ಸಾಮಾನ್ಯ ಮಹಿಳೆ | ಸಾಮಾನ್ಯ |
ಊಡಗಿ | ಎಸ್ಸಿ | ಸಾಮಾನ್ಯ ಮಹಿಳೆ |
ಕೋಲಕುಂದಾ | ಎಸ್ಸಿ | ಸಾಮಾನ್ಯ ಮಹಿಳೆ |
ಜಾಕನಪಲ್ಲಿ | ಎಸ್ಸಿ | ಸಾಮಾನ್ಯ ಮಹಿಳೆ |
ಹಂದರಕಿ | ಎಸ್ಸಿ | ಸಾಮಾನ್ಯ ಮಹಿಳೆ |
ಕುರಕುಂಟಾ | ಎಸ್ಸಿ ಮಹಿಳೆ | ಸಾಮಾನ್ಯ |
ನೀಲಹಳ್ಳಿ | ಎಸ್ಸಿ ಮಹಿಳೆ | ಸಾಮಾನ್ಯ |
ಮದನಾ | ಎಸ್ಸಿ ಮಹಿಳೆ | ಪ್ರವರ್ಗ-ಎ ಮಹಿಳೆ |
ಮೇದಕ | ಎಸ್ಸಿ ಮಹಿಳೆ | ಸಾಮಾನ್ಯ |
ರಿಬ್ಬನಪಲ್ಲಿ | ಎಸ್ಸಿ ಮಹಿಳೆ | ಸಾಮಾನ್ಯ |
ಬಟಗೇರಾ | ಎಸ್ಸಿ ಮಹಿಳೆ | ಸಾಮಾನ್ಯ |
ಸಭೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವಿಜಯಾ ಜ್ಯೋತ್ಸ್ನಾ, ನಾನು ಐಎಎಸ್ ಮುಗಿಸಿ, ನನ್ನ ಕರಿಯರ್ ಆರಂಭಿಸಿದ್ದು ಸೇಡಂನ ಸಹಾಯಕ ಆಯುಕ್ತರಾಗಿ. ಈಗ ಕಲಬುರಗಿ ಜಿಲ್ಲಾಧಿಕಾರಿಯಾದ ನಂತರ ಸೇಡಂಗೆ ಬಂದಿದ್ದೇನೆ. ನನಗೆ ತವರಿಗೆ ಬಂದ ಅನುಭವವಾಗಿದೆ. ಸೇಡಂನ ಜನತೆ ತುಂಬಾ ಒಳ್ಳೆಯವರು. ಯಾವುದೇ ತಂಟೆ ತಕರಾರು ಇಲ್ಲದೆ ಕಾನೂನು ಪಾಲಿಸುವ ಮನೋಭಾವವುಳ್ಳವರು ಎಂದು ತಾವು ಸೇಡಂ ಸಹಾಯಕ ಆಯುಕ್ತರಾಗಿದ್ದಾಗಿನ ನೆನಪುಗಳನ್ನು ಮೆಲುಕು ಹಾಕಿದರು.