ಕಲಬುರಗಿ:ಮಹಾಮಾರಿ ಕೊರೊನಾ ವೈರಸ್ ಬಹುತೇಕ ಖಾಸಗಿ ಕ್ಷೇತ್ರದ ನೌಕರರ ಜೀವನ ಬೀದಿಗೆ ತಂದು ನಿಲ್ಲಿಸಿದೆ. ಖಾಸಗಿ ಶಾಲೆಗಳಲ್ಲಿ ತಾತ್ಕಾಲಿಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ವೇತನವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಇದೇ ರೀತಿ ಇಲ್ಲಿನ ಚಿತ್ತಾಪುರ ಪಟ್ಟಣ ನಿವಾಸಿ ಶಿಕ್ಷಕ ಬಸವರಾಜ್ ಕೊರೊನಾ ಬಂದ ನಂತರ ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದಲ್ಲದೆ, ಜೀವನ ನಿರ್ವಹಣೆಗಾಗಿ ಹಸು ಸಾಕಾಣಿಕೆಗೆ ಇಳಿದಿದ್ದಾರೆ. ವಾಡಿ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಸಮಾಜ ವಿಷಯ ಪಾಠ ಮಾಡುತ್ತಿದ್ದ ಬಸವರಾಜ್, ಕೊರೊನಾದಿಂದ ಶಾಲೆಗಳು ಮುಚ್ಚಲ್ಪಟ್ಟ ಬಳಿಕ ಕಳೆದ 6 ತಿಂಗಳಿನಿಂದ ವೇತನ ಸಿಗದೆ ಇಲ್ಲದ ಸಂಕಷ್ಟಕ್ಕೆ ಸೀಲುಕಿದ್ದರು. ಜೀವನ ನಡೆಸಲು ಶಿಕ್ಷಕ ಬಸವರಾಜ ಬೇರೆ ಬೇರೆ ಕಡೆ ಕೆಲಸಕ್ಕಾಗಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಒಂದು ಹಸು ಕೊಂಡು ಅದರ ಪೋಷಣೆಯಲ್ಲಿ ತೊಡಗಿದ್ದಾರೆ.