ಸೇಡಂ:ಸೇಡಂ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಸಾಮಾಜಿಕ ಚಳವಳಿಗೆ ಸ್ವಾಮೀಜಿಗಳು ಕರೆ ಕೊಟ್ಟಿದ್ದಾರೆ.
ಸೇಡಂ ಜಿಲ್ಲೆಯಾಗಿಸುವ ಸಾಮಾಜಿಕ ಚಳವಳಿಗೆ ಕರೆ ಕೊಟ್ಟ ಮಠಾಧೀಶರು ಓದಿ: ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಪ್ರತಿಕ್ರಿಯೆ
ಸೇಡಂ ಜಿಲ್ಲಾ ರಚನಾ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಠಾಧೀಶರ ನೇತೃತ್ವದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಪಕ್ಷಾತೀತವಾಗಿ ಪ್ರತಿಯೊಬ್ಬರೂ ಸೇಡಂ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಚಳವಳಿ ಪ್ರಾರಂಭಿಸಬೇಕು. ಜಿಲ್ಲಾ ಕೇಂದ್ರ ಮಾಡುವವರೆಗೂ ಹಿಂದೇಟು ಹಾಕಬಾರದು ಎಂದು ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಕರೆ ಕೊಟ್ಟರು.
ಸೇಡಂ ತಾಲೂಕು ಎಲ್ಲಾ ರೀತಿಯಿಂದಲೂ ಸಂಪದ್ಭರಿತವಾಗಿದೆ. ಸಿಮೆಂಟ್ ಕಾರ್ಖಾನೆಗಳ, ವ್ಯಾಪಾರದ ತೆರಿಗೆ ನಮ್ಮವರಿಗೇ ಉಪಯೋಗವಾಗಲಿದೆ. ವಿಜಯನಗರದ ನಂತರ ಸೇಡಂ ಜಿಲ್ಲೆಯಾಗಿಸುವ ಮೂಲಕ ಇಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು ಮತ್ತು ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ಸಾಮಾಜಿಕ ಚಳವಳಿಯೇ ಚರ್ಚೆಗಳಾಗಬೇಕು. ಐವತ್ತು ವರ್ಷ ಹಿಂದಿದ್ದೇವೆ ಎಂಬ ದಕ್ಷಿಣ ಭಾರತದವರು ಹೇಳಿಕೆಯಂತೆ ಬದುಕಬಾರದು. ಸೇಡಂ ಜಿಲ್ಲೆಯಾದರೆ ಈ ಭಾಗ ಸಮೃದ್ಧ ಕೇಂದ್ರವಾಗಲಿದೆ ಎಂದರು.