ಕಲಬುರಗಿ: ಅಕ್ರಮ ಗಾಂಜಾ ಬೆಳೆಗಾರರ ಬೆನ್ನು ಬಿದ್ದ ಚಿಂಚೋಳಿ ಪೊಲೀಸರು ದಾಳಿಯನ್ನು ಮುಂದುವರೆಸಿದ್ದಾರೆ. ಇಂದು ಚಿಂಚೋಳಿ ತಾಲೂಕಿನ ಧರಿ ತಾಂಡಾದ ಹೊಲವೊಂದರಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಗಾಂಜಾ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಂಚೋಳಿ ಪೊಲೀಸರ ಕಾರ್ಯಾಚರಣೆ: 223 ಕೆಜಿ ಗಾಂಜಾ ವಶ, ಆರೋಪಿಯ ಬಂಧನ
ಬೆಂಗಳೂರು ಪೊಲೀಸರ ಕಾರ್ಯಾಚರಣೆ ನಂತರ ಎಚ್ಚೆತ್ತ ಕಲಬುರಗಿ ಪೊಲೀಸರು ಕಾರ್ಯಚರಣೆಯನ್ನು ಚುರುಕುಗೊಳಿಸಿದ್ದಾರೆ. ಅಕ್ರಮ ಗಾಂಜಾ ಬೆಳೆಗಾರರ ಬೆನ್ನು ಬಿದ್ದ ಚಿಂಚೋಳಿ ಪೊಲೀಸರು ಸುಮಾರು 10.50 ಲಕ್ಷ ರೂಪಾಯಿ ಮೌಲ್ಯದ 223 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಚಿಂಚೋಳಿ ಪೊಲೀಸರ ಕಾರ್ಯಾಚರಣೆ: 223 ಕೆ.ಜಿ ಗಾಂಜಾ ವಶ..
ಸುಮಾರು 10.50 ಲಕ್ಷ ರೂಪಾಯಿ ಮೌಲ್ಯದ 223 ಕೆಜಿ ಗಾಂಜಾ ವಶಕ್ಕೆ ಪಡೆದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಧರಿ ತಾಂಡಾದ ಧನಸಿಂಗ್ ಬಂಧಿತ ಆರೋಪಿ. ಕೆಲ ವರ್ಷಗಳಿಂದ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಚಿಂಚೋಳಿ ಡಿವೈಎಸ್ಪಿ ವೀರಭದ್ರಯ್ಯ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.