ಕಲಬುರಗಿ:ಅನಾರೋಗ್ಯ ಪೀಡಿತ ಪತ್ನಿಯನ್ನು ಆಸ್ಪತ್ರೆಯಲ್ಲಿ ವೃದ್ಧನೋರ್ವ ಸ್ಟ್ರೆಚರ್ ಮೇಲೆ ತಳ್ಳಿಕೊಂಡು ಹೋಗುವ ವಿಡಿಯೋವೊಂದು ವೈರಲ್ ಆಗಿದೆ.
ಪತ್ನಿ ಸ್ಟ್ರೆಚರ್ ಮೇಲಿರಿಸಿ ತಾನೇ ತಳ್ಳಿಕೊಂಡು ಹೋದ ವೃದ್ಧ:ಮನಕಲಕುವ ವಿಡಿಯೋ ವೈರಲ್ - old men push strecher
ವೃದ್ಧನೊಬ್ಬ ತನ್ನ ರೋಗಗ್ರಸ್ತ ಪತ್ನಿಯನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಕುಂಟುತ್ತಲೇ ತಳ್ಳಿಕೊಂಡು ಹೋಗಿರುವ ಮನಕಲಕುವ ವಿಡಿಯೋವೊಂದು ಸಕತ್ ವೈರಲ್ ಆಗಿದೆ.
ಕಲಬುರಗಿ ಜಿಲ್ಲಾಸ್ಪತ್ರೆ(ಜಿಮ್ಸ್) ಸಿಬ್ಬಂದಿ ನಿರ್ಲಕ್ಷ್ಯದಿಂದ ಇಂತಹದೊಂದು ಮನ ಕಲಕುವ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಅಫ್ಜಲ್ಪುರ ತಾಲೂಕಿನ ಚಿಂಚೋಳಿ ಗ್ರಾಮದ ವೃದ್ಧೆ ನಾಗಮ್ಮ ಚಿಕಿತ್ಸೆಗಾಗಿ ಗಂಡನ ಜೊತೆ ಜಿಮ್ಸ್ ಆಸ್ಪತ್ರೆ ಆಗಮಿಸಿದ್ದರು. ಮೈ ಕೈ ನೋವು, ತಲೆಗೆ ಪೆಟ್ಟಾದ ಕಾರಣ ವೃದ್ದೆಗೆ ಎಕ್ಸರೇ ಮಾಡಿದ್ದಾರೆ. ನಂತರ ವೃದ್ದೆಯನ್ನು ದಾಖಲಿಸಿಕೊಳ್ಳದೇ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯ ತೋರಿ ಎಕ್ಸ್ರೇ ಕೋಣೆ ಬಳಿಯೇ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ವೃದ್ಧೆಯ ಪತಿ ಜಂಪಣ್ಣ ಎಷ್ಟೇ ಕೇಳಿಕೊಂಡರು ಯಾರೂ ಕೇರ್ ಮಾಡಿಲ್ಲವಂತೆ. ಹೀಗಾಗಿ ಎಕ್ಸ್ರೇ ಕೋಣೆಯಿಂದ ಓಪಿಡಿ ಕೊಠಡಿವರೆಗೂ ಸ್ಟ್ರೆಚರ್ ಮೇಲೆ ಹೆಂಡತಿಯನ್ನು ಮಲಗಿಸಿ ಜಂಪಣ್ಣ ಖುದ್ದು ತಾವೇ ಸ್ಟ್ರೆಚರ್ ತಳ್ಳಿಕೊಂಡು ಹೋಗಿದ್ದಾರೆ. ಇನ್ನು ವೃದ್ಧ ಜಂಪಣ್ಣ ಕುಂಟುತ್ತ ಸ್ಟ್ರೆಚರ್ ತಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.