ಕಲಬುರಗಿ: ಸಂಸದ ಉಮೇಶ ಜಾಧವ್ ಅವರು ದಿಢೀರ್ ಅಂತಾ ನಗರ ಪ್ರದಕ್ಷಿಣೆ ಹಾಕಿ ಪಾಲಿಕೆ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.
ದಿಢೀರ್ ನಗರ ಪ್ರದಕ್ಷಿಣೆ ಹಾಕಿದ ಹೊಸ ಸಂಸದರು ಮಾಡಿದ್ದೇನು?
ಸಂಸದ ಉಮೇಶ ಜಾಧವ ಅವರು ನಗರ ಪ್ರದಕ್ಷಿಣೆ ಹಾಕಿ ಪಾಲಿಕೆಯ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.
ಖ್ವಾಜಾ ಬಂದೇನವಾಜ್ ಉರುಸ್ ಹಿನ್ನೆಲೆ ನೇರವಾಗಿ ಬಂದೇನವಾಜ್ ದರ್ಗಾಕ್ಕೆ ಭೇಟಿ ನೀಡಿದ ಸಂಸದ ಉಮೇಶ್ ಜಾಧವ್ ದರ್ಗಾದ ಪೀಠಾಧಿಪತಿ ಸೈಯದ್ ಖುಸ್ರೋ ಹುಸ್ಸೇನಿ ಮತ್ತಿತರರ ಜೊತೆ ಚರ್ಚೆ ನಡೆಸಿದರು. ಉರುಸ್ಗೆ ಪೂರ್ವಭಾವಿಯಾಗಿ ನಗರದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದ ಸಂಸದರು ಸಂದಲ್ ಮೆರವಣಿಗೆ ಸಾಗುವ ರಸ್ತೆ ದುರಸ್ತಿ, ಸ್ವಚ್ಛತೆ ಇತ್ಯಾದಿಗಳ ಕುರಿತು ಮಾಹಿತಿ ಪಡೆದರು.
ಬಳಿಕ ದರ್ಗಾ ಸುತ್ತಮುತ್ತ ಬಡಾವಣೆಗಳಲ್ಲಿ ಸಂಚರಿಸಿದ ಸಂಸದರು ಚರಂಡಿ, ರಸ್ತೆ, ಕುಡಿವ ನೀರು ಸರಬರಾಜು ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿದರು. ನೀರಿನ ಸಮಸ್ಯೆ ಹಾಗೂ ಪ್ರಗತಿ ಕಾಮಗಾರಿಗಳ ವಿಳಂಬದ ಬಗ್ಗೆ ಜನ ಗೋಳು ತೊಡಿಕೊಂಡಾಗ ಸ್ಥಳದಲ್ಲಿಯೇ ಇದ್ದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.