ಕಲಬುರಗಿ: ರೈತನ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿ ಹಣ ಡ್ರಾ ಮಾಡಿರುವ ಘಟನೆ ಚಿಂಚೋಳಿ ತಾಲೂಕಿನ ರಟಕಲ್ ನಲ್ಲಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಆಧಾರ್ ಸಂಖ್ಯೆ ಜೋಡಣೆ ಮಾಡಿ ಬ್ಯಾಂಕ್ ಖಾತೆಗೆ ಕನ್ನ ಆರೋಪ
ರೈತನ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿ ಹಣ ಡ್ರಾ ಮಾಡಿದ್ದಾರೆ ಎನ್ನಲಾದ ಆರೋಪ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ರಟಕಲ್ ನಲ್ಲಿ ಕೇಳಿ ಬಂದಿದೆ.
ರಟಕಲ್ನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದ್ದು, ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ತಿಪ್ಪಣ್ಣ ಕಾಳಮದ್ರಗಿ ಎಂಬ ರೈತನ ಖಾತೆಗೆ ಬೇರೆಯವರ ಆಧಾರ್ ನಂಬರ್ ಜೋಡಣೆ ಮಾಡಿ, ಕಳೆದ ಡಿಸೆಂಬರ್ 29 ರಂದು ಬೆಳಗ್ಗೆ 11 ಗಂಟೆ ಅವಧಿಯಲ್ಲಿ ಮೂರು ಬಾರಿ ಹಣ ಡ್ರಾ ಮಾಡಿ ಒಟ್ಟು 28,500 ರೂ. ಕದಿಯಲಾಗಿದೆ ಎಂದು ರೈತ ತಿಪ್ಪಣ್ಣ ಆರೋಪಿಸಿದ್ದಾರೆ.
ಹೀಗಾದ್ರೆ ಬ್ಯಾಂಕ್ ನಲ್ಲಿ ನಮ್ಮ ಹಣಕ್ಕೆ ಗ್ಯಾರಂಟಿ ಯಾರು ಎಂದು ಪ್ರಶ್ನಿಸುತ್ತಿರುವ ರೈತ ತಿಪ್ಪಣ್ಣ, ಈ ಘಟನೆಗೆ ಬ್ಯಾಂಕ್ ಮ್ಯಾನೇಜರ್ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಇದೇ ವಿಷಯವಾಗಿ ರೈತಪರ ಸಂಘಟನೆ ನೇತೃತ್ವದಲ್ಲಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ, ಡ್ರಾ ಮಾಡಿರುವ ಹಣ ವಾಪಸ್ ಮರಳಿಸುವಂತೆ ಆಗ್ರಹಿಸಿದ್ದಾರೆ. ಘಟನೆಯಿಂದ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಇನ್ನುಳಿದ ರೈತರಿಗೂ ಹಣ ಕಳೆದುಕೊಳ್ಳುವ ಆತಂಕ ಶುರುವಾಗಿದೆ.