ಕಲಬುರಗಿ: ಹಿಜಾಬ್ ಇಟ್ಟುಕೊಂಡು ಸಿದ್ದರಾಮಯ್ಯ ಅವರು ರಾಜಕೀಯ ಸ್ಕೋರ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹಿಜಾಬ್ ಬಗ್ಗೆ ದ್ವೇಷ ಭಾವನೆ ಬಿತ್ತಿರುವುದೇ ಬಿಜೆಪಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಬಿ. ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ಸ್ಕೋರ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಕ್ರಿಕೆಟ್ನಲ್ಲಿ ಆಟಗಾರರು ಸ್ಕೋರ್ ಮಾಡುವ ರೀತಿ ಸಿದ್ದರಾಮಯ್ಯ ಪೊಲಿಟಿಕಲ್ ಸ್ಕೋರ್ ಮಾಡುವ ಯತ್ನ ಅವರದ್ದಾಗಿದೆ ಎಂದು ಗುಡುಗಿದರು. ಸಿದ್ದರಾಮಯ್ಯ ಅವರು ಇಳಿದಿರುವ ಮಟ್ಟಕ್ಕೆ ನಾನು ಇಳಿಯುವ ಪ್ರಯತ್ನ ಮಾಡಲ್ಲ. ಹಿಜಾಬ್ ವಿಚಾರ ಕೋರ್ಟ್ನಲ್ಲಿದೆ, ಹಾಗಾಗಿ ಈ ಹಂತದಲ್ಲಿ ನಾನು ಹೆಚ್ಚೇನು ಮಾತನಾಡಲಾರೆ ಎಂದರು.