ಕಲಬುರಗಿ:ಮೋದಿ ಬಗ್ಗೆ ಮಾತಾಡೋಕೆ ಮಾತಾಡುವಷ್ಟು ಇವನಿಗೆ ಯೋಗ್ಯತೆ ಇದೆಯಾ? ಅಂತ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ಏಕವಚನದಲ್ಲೇ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಪ್ರಧಾನಿ ಮೋದಿ ಹೆಬ್ಬೆಟ್ಟು' ಎಂದಿರುವ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮೋದಿ ಬಗ್ಗೆ ಮಾತನಾಡಲು ಇವನಿಗೆ ಯಾವ ಯೋಗ್ಯತೆ ಇದೆ ಎಂದು ಏಕವಚನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಶ್ನಿಸಿದರು.
ಇದನ್ನೂ ಓದಿ:ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಬಂಡವಾಳ! ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ: ಕೈ ಆಕ್ರೋಶಕಾರಿ ಟ್ವೀಟ್
ಮೋದಿ ಏನು ಅನ್ನೋದು ದೇಶದ ಜನ ತೀರ್ಮಾನ ಮಾಡಿದ್ದಾರೆ. ಎಲ್ಲಾ ವರ್ಗದ ಜನ ಮೋದಿಯನ್ನು ಮೆಚ್ಚಿಕೊಂಡಿದ್ದಾರೆ. ಇಡೀ ಪ್ರಪಂಚವೇ ಕೊಂಡಾಡುವಾಗ ಈ ಸಿದ್ದರಾಮಯ್ಯನ ಸರ್ಟಿಫಿಕೇಟ್ ಬೇಕಾಗಿಲ್ಲ, ಸಿದ್ದರಾಮಯ್ಯ ನಮಗೆ ಲೆಕ್ಕಕ್ಕಿಲ್ಲ. ಮೋದಿ ಅವರ ಬಗ್ಗೆ ಮಾತನಾಡಲು ಇವನಿಗೆ ಒಂದು ಪರ್ಸೆಂಟ್ ಸಹ ಯೋಗ್ಯತೆ ಇಲ್ಲ ಅಂತಾ ಈಶ್ವರಪ್ಪ ಗುಡುಗಿದರು.