ಕಲಬುರಗಿ:ಹೈದರಾಬಾದ್ ಕರ್ನಾಟಕದ ಜನರ ಆರಾಧ್ಯ ದೈವ, ನಡೆದಾಡುವ ದೇವರೆಂದು ಹೆಸರುವಾಸಿಯಾಗಿರುವ ಯಾನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೊನೆಗೂ ಭಕ್ತರಿಗೆ ದರ್ಶನ ನೀಡಿದ್ದಾರೆ.
ಕೊನೆಗೂ ಭಕ್ತರಿಗೆ ದರ್ಶನ ನೀಡಿದ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರು
ನಡೆದಾಡುವ ದೇವರೆಂದು ಹೆಸರುವಾಸಿಯಾಗಿರುವ ಯಾನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರನ್ನು ಟ್ರಸ್ಟ್ನವರು ವ್ಹೀಲ್ ಚೇರ್ ಮೇಲೆ ಕರೆತಂದು ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಿದರು.
ಸೇಡಂ ತಾಲೂಕಿನ ಯಾನಾಗುಂದಿಯ ಮಾಣಿಕಗಿರಿಯಲ್ಲಿ ಅಮ್ಮನವರ 86ನೇ ಹುಟ್ಟುಹಬ್ಬ ಹಾಗೂ ಗುರು ಪೂರ್ಣಿಮೆ ನಿಮಿತ್ತ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಅಮ್ಮನವರ ದರ್ಶನಕ್ಕಾಗಿ ದೇಶದ ಹಲವಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಆದ್ರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಸಿಗುವ ಸಾಧ್ಯತೆ ಕಡಿಮೆ ಇತ್ತು. ಕೊನೆಗಳಿಗೆಯಲ್ಲಿ ಟ್ರಸ್ಟ್ನವರು ವ್ಹೀಲ್ ಚೇರ್ ಮೇಲೆ ಅಮ್ಮನವರನ್ನು ಕರೆತಂದು ದರ್ಶನದ ವ್ಯವಸ್ಥೆ ಮಾಡಿದ್ದಾರೆ.
ಟ್ರಸ್ಟ್ನವರು ಅಮ್ಮನವರ ಮುಕ್ತ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿಲ್ಲ ಹಾಗೂ ಅನಾರೋಗ್ಯ ಪೀಡಿತರಾದ ಅಮ್ಮನವರಿಗೆ ಟ್ರಸ್ಟ್ನವರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ ನಂತರ ಮಾಣಿಕೇಶ್ವರಿ ಟ್ರಸ್ಟ್ನಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಮಾತೆಯ ಆರೋಗ್ಯದಲ್ಲಿ ಸುಧಾರಣೆಯಾಗಲಿ ಎಂದು ಅವರ ಹುಟ್ಟೂರು ಸೇಡಂ ತಾಲೂಕಿನ ಮಲ್ಲಾಬಾದನಲ್ಲಿ ಹೋಮ ಹವನದ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.