ಕಲಬುರಗಿ:ಎತ್ತಿನ ಬಂಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಕಮಲಾಪೂರ ತಾಲೂಕಿನ ಕಟ್ಟೋಳಿ ಕ್ರಾಸ್ ಬಳಿ ಸಂಭವಿಸಿದೆ.
ಎತ್ತಿನ ಬಂಡಿಗೆ ಲಾರಿ ಡಿಕ್ಕಿ: ಮೂವರು ಸಾವು! ಚಿತ್ತಾಪೂರ ತಾಲೂಕಿನ ಅಣಕಲ್ ಕಿಂಡಿ ತಾಂಡಾ ನಿವಾಸಿಗಳಾದ ಜಗದೇವಿ ರಾಠೋಡ್(32), ಸವಿತಾ ಚವ್ಹಾಣ(33) ಹಾಗೂ ದಶರಥ ಚವ್ಹಾಣ(40) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಹುಮನಾಬಾದ ಕಡೆಯಿಂದ ಕಲಬುರಗಿಯತ್ತ ಹೊರಟಿದ್ದ ಲಾರಿಯು ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಮಷೀನ್‍ಗಳು ವ್ಯಕ್ತಿಗಳ ಮೇಲೆ ಬಿದ್ದಿರೋದ್ರಿಂದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಬಂಡಿಯಲ್ಲಿದ್ದ ಮೂವರಿಗೂ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.