ಕರ್ನಾಟಕ

karnataka

ETV Bharat / state

ಜೀವಬೆದರಿಕೆ ಪತ್ರ: ನಿಜಗುಣಾನಂದ ಸ್ವಾಮೀಜಿಗೆ ಪೊಲೀಸ್​​​​ ಭದ್ರತೆ

ನಿಜಗುಣಾನಂದ ಸ್ವಾಮೀಜಿಗೆ ಜೀವಬೆದರಿಕೆ ಪತ್ರ ಬಂದಿರುವ ಬಗ್ಗೆ ಬೆಳಗಾವಿ ಪೊಲೀಸರು ತಮಗೆ ಮಾಹಿತಿ ನೀಡಿರುವ ಹಿನ್ನೆಲೆ ಶ್ರೀಗಳಿಂದ ಪ್ರವಚನ ನಡೆಯುವ ಸ್ಥಳ ಮತ್ತು ಅವರು ವಾಸ್ತವ್ಯ ಮಾಡಿರೋ ಮನೆಗೆ ಪೊಲೀಸರನ್ನು ನಿಯೋಜನೆ ಮಾಡಿದ್ದಾಗಿ ಎಸ್ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.

Life threat to Nijagunananda Swamiji's: Police security at home
ನಿಜಗುಣಾನಂದ ಸ್ವಾಮೀಜಿಗೆ ಜೀವ ಬೆದರಿಕೆ: ಮನೆಗೆ ಪೊಲೀಸ್​ ಭದ್ರತೆ

By

Published : Jan 25, 2020, 9:19 AM IST

ಕಲಬುರಗಿ:ನಿಜಗುಣಾನಂದ ಸ್ವಾಮೀಜಿಗೆ ಜೀವಬೆದರಿಕೆ ಪತ್ರ ಬಂದಿರುವ ಬಗ್ಗೆ ಬೆಳಗಾವಿ ಪೊಲೀಸರು ತಮಗೆ ಮಾಹಿತಿ ನೀಡಿರುವ ಹಿನ್ನೆಲೆ ಶ್ರೀಗಳಿಂದ ಪ್ರವಚನ ನಡೆಯುವ ಸ್ಥಳ ಮತ್ತು ಅವರು ವಾಸ್ತವ್ಯ ಮಾಡಿರೋ ಮನೆಗೆ ಪೊಲೀಸರನ್ನು ನಿಯೋಜನೆ ಮಾಡಿದ್ದಾಗಿ ಎಸ್ಪಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.

ನಿಜಗುಣಾನಂದ ಸ್ವಾಮೀಜಿಗೆ ಜೀವಬೆದರಿಕೆ ಪತ್ರ ಬಂದಿರುವ ಬಗ್ಗೆ ಶ್ರೀಗಳಿಂದ ಅಥವಾ ಭಕ್ತರಿಂದ ಇಲ್ಲಿವರಗೆ ಜೇವರ್ಗಿ ಠಾಣೆಗೆ ಯಾವುದೇ ದೂರು ಬಂದಿಲ್ಲ. ಆದರೆ, ಬೆಳಗಾವಿ ಪೊಲೀಸರು ಸ್ವಾಮೀಜಿಗೆ ಜೀವಬೆದರಿಕೆ ಪತ್ರ ಬಂದಿರೋ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಜೇವರ್ಗಿ ಪಟ್ಟಣದಲ್ಲಿ ಸದ್ಯ ಪ್ರವಚನ ಕಾರ್ಯಕ್ರಮ ನಡಯುತ್ತಿರುವ ಸ್ಥಳಕ್ಕೆ ಮತ್ತು ಅವರು ವಾಸ್ತವ್ಯ ಮಾಡಿರೋ ಮನೆಗೆ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ. ಸ್ವಾಮೀಜಿಯವರೊಂದಿಗೆ ಮಾತನಾಡಿ ಹೆಚ್ಚಿನ ಭದ್ರತೆ ನೀಡೋ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಯಡಾ ಮಾರ್ಟಿನ್ ತಿಳಿಸಿದ್ದಾರೆ.

ABOUT THE AUTHOR

...view details