ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಂಧಿತರಾದ ಡಿವೈಸ್ಪಿ ಹಾಗೂ ಸಿಪಿಐಯನ್ನು ನ್ಯಾಯಾಲಯ 8 ದಿನಗಳ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ. ಘೋರ ವಂಚನೆಯ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ನೀಡಿದ ಮಾಹಿತಿ ಮೇರೆಗೆ ರಾಯಚೂರು ಜಿಲ್ಲೆ ಲಿಂಗಸುಗೂರು ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಅವರನ್ನು ಸಿಐಡಿ ಬಂಧಿಸಿತ್ತು. ಇವರನ್ನು ಕಲಬುರಗಿ ಜಿಲ್ಲಾ 3ನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ನಿನ್ನೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಇಲ್ಲಿಯವರೆಗೆ 31 ಆರೋಪಿಗಳ ಬಂಧನವಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮ: ಬಂಧಿತ ಡಿವೈಎಸ್‌ಪಿ, ಇನ್ಸ್ಪೆಕ್ಟರ್ಗೆ 8 ದಿನ ಸಿಐಡಿ ಕಸ್ಟಡಿ
ಸಿಐಡಿ ಮನವಿ ಮೇರೆಗೆ ಈ ಇಬ್ಬರು ಅಧಿಕಾರಿಗಳನ್ನು 8 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿತು. ನೇಮಕಾತಿ ಕರ್ಮಕಾಂಡದಲ್ಲಿ ಭಾಗಿಯಾದ ಈ ಇಬ್ಬರನ್ನು ತನಿಖಾಧಿಕಾರಿಗಳು ಇಂದಿನಿಂದ ತೀವ್ರ ವಿಚಾರಣೆಗೆ ಗುರಿ ಪಡಿಸಲಿದ್ದಾರೆ.
ಬಂಧಿತ ಡಿವೈಎಸ್‌ಪಿ, ಇನ್ಸ್ಪೆಕ್ಟರ್ 8 ದಿನ ಸಿಐಡಿ ಕಸ್ಟಡಿಗೆ