ಕರ್ನಾಟಕ

karnataka

ETV Bharat / state

ನೆರೆಯಿಂದ ರೋಸಿ ಹೋದ ಹಿರಿಯ ಜೀವ: ಮನೆ ಮಹಡಿ ಏರಿ ಅಜ್ಜಿಯ ಪ್ರತಿಭಟನೆ - Grandmother protest in kalaburgi

ಪ್ರತಿಬಾರಿ ಪ್ರವಾಹ ಬಂದಾಗಲೂ ಸಂಕಷ್ಟ ಅನುಭವಿಸಿ ರೋಸಿಹೋಗಿರುವ ಅಜ್ಜಿಯೊಬ್ಬರು ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

Grandmother protest over terrace
ಮನೆ ಮಹಡಿ ಏರಿ ಅಜ್ಜಿಯ ಪ್ರತಿಭಟನೆ

By

Published : Oct 16, 2020, 4:12 PM IST

Updated : Oct 16, 2020, 4:41 PM IST

ಕಲಬುರಗಿ:ವರುಣಾರ್ಭಟದಿಂದ ಭೀಮಾ ನದಿಗೆ ಬಂದ ಭೀಕರ ಪ್ರವಾಹದಿಂದಾಗಿ ಕಲಬುರಗಿ ತಾಲೂಕಿನ ಫೀರೋಜಾಬಾದ್​ಗೆ ಅಪಾರ ಪ್ರಮಾಣದ ನೀರು ನುಗ್ಗಿ ಮಹಾಲಕ್ಷ್ಮಿ ಮಂದಿರ, ಅಂಬಿಗರ ಚೌಡಯ್ಯನ ಮಂದಿರ ಸೇರಿದಂತೆ ಹಲವು ಮನೆಗಳು ಮುಳುಗಡೆಯಾಗಿದ್ದವು. ಪ್ರತಿಬಾರಿ ಪ್ರವಾಹ ಬಂದಾಗಲೂ ಸಂಕಷ್ಟ ಅನುಭವಿಸಿ ರೋಸಿಹೋಗಿರುವ ಅಜ್ಜಿಯೊಬ್ಬರು ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಮನೆ ಮಹಡಿ ಏರಿ ಅಜ್ಜಿಯ ಪ್ರತಿಭಟನೆ

ಕಲ್ಲಮ್ಮ ಎಂಬ ಅಜ್ಜಿ ಮನೆ ಮಹಡಿ ಹತ್ತಿ ಕುಳಿತು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಮೂರು ದಿನಗಳಿಂದಲೂ ಮಹಡಿ ಏರಿ ಕುಳಿತ ಅಜ್ಜಿ, ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ. ಪ್ರವಾಹ ಬಂದು ನಮ್ಮ ಮನೆಗಳಿಗೆ ಹಾನಿಯಾಗಿದೆ. ಈವರೆಗೂ ಯಾರೂ ಬಂದು ವಿಚಾರಿಸಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿ ಪ್ರವಾಹ ಬಂದಾಗಲೂ ಇದೇ ಪರಿಸ್ಥಿತಿ ಆಗುತ್ತದೆ. ಎತ್ತರದ ಸ್ಥಳದಲ್ಲಿ, ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿಕೊಡುವಂತೆ ಅಜ್ಜಿ ಆಗ್ರಹಿಸಿದ್ದಾರೆ.

Last Updated : Oct 16, 2020, 4:41 PM IST

ABOUT THE AUTHOR

...view details