ಕಲಬುರಗಿ :ವಿರೋಧ ಪಕ್ಷದ ನಾಯಕರು ಸಾಂವಿಧಾನಿಕ ಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲೆಮೀರಿ ವರ್ತನೆ ಮಾಡಿದರೆ ಸರ್ಕಾರಕ್ಕೂ ನಿಯಮಗಳು ಇರುತ್ತವೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುಡುಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಝೂಮ್ ಮೀಟಿಂಗ್ ಮಾಡಲು ಅವಕಾಶ ನಿರಾಕರಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಸಹ ಮುಖ್ಯಮಂತ್ರಿಯಾದವರು, ಹೇಗಿರಬೇಕು ಎನ್ನುವುದು ಅವರಿಗೂ ಗೊತ್ತಿರಬೇಕು.
ಕೋವಿಡ್ ಒಂದು ಯುದ್ಧ ಕಾಲ. ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಮರೆತು ಜನರ ರಕ್ಷಣೆಯಲ್ಲಿ ತೊಡಗಬೇಕು, ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ರಾಜಕೀಯ ಮಾಡುತ್ತಿದ್ದಾರೆ.