ಸೇಡಂ (ಕಲಬುರಗಿ): ಕೊರೊನಾ ಮಹಾಮಾರಿಯಿಂದ ಕೆಳವರ್ಗದ ಜನರು ತೀರಾ ಸಂಕಷ್ಟಕ್ಕೆ ಎದುರಾಗಿರುವುದು ತಿಳಿದ ವಿಷಯವೇ. ಹಾಗೆಯೇ ಮನೆ ಮನೆಗೂ ಪತ್ರಿಕೆಗಳನ್ನು ವಿತರಿಸುವ ಯುವಕರ ಕುಟುಂಬಗಳೂ ಸಹ ಇದರಿಂದ ಹೊರತಾಗಿಲ್ಲ.
ಪತ್ರಿಕೆ ವಿತರಕರಿಗೂ ಆಹಾರ ಧಾನ್ಯದ ಕಿಟ್ ವಿತರಣೆ
ಕೊರೊನಾ ಲಾಕ್ಡೌನ್ನಿಂದಾಗಿ ಪ್ರತಿಯೊಬ್ಬರು ಒಂದಿಲ್ಲೊಂದು ಸಮಸ್ಯೆಗೆ ಗುರಿಯಾಗಿದ್ದಾರೆ. ಅದರಂತೆ ನಿತ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪತ್ರಿಕೆ ವಿತರಕರೂ ಸಹಾ ಇನ್ನಿಲ್ಲದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಸೇಡಂನ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯನ ಕಿಟ್ ವಿತರಿಸಲಾಯಿತು.
ಪತ್ರಿಕೆ ವಿತರಕರಿಗೂ ಆಹಾರ ಧಾನ್ಯದ ಕಿಟ್ ವಿತರಿಸಿ ಮಾನವೀಯತೆ ಮೆರೆದ ಸಮಾಜ ಸೇವಕರು
ಇದನ್ನು ಮನಗಂಡು ಸಮಾಜ ಸೇವಕ ಪ್ರಶಾಂತ ಕೇರಿ, ಬಸವರಾಜ ಕೋಸ್ಗಿ, ನಾಗರಾಜ ಹಾಗೂ ಗೆಳೆಯರು ಪತ್ರಿಕೆ ವಿತರಿಸುವ ಯುವಕರಿಗೆ ಧವಸ ಧಾನ್ಯಗಳ ಕಿಟ್ ನೀಡಿ, ಮಾನವೀಯತೆ ಮೆರೆದಿದ್ದಾರೆ. ಈ ಕಿಟ್ನಲ್ಲಿ ಅಕ್ಕಿ, ಬೇಳೆ, ಗೋಧಿ ಹಿಟ್ಟು ಜೊತೆಗೆ ಅಡುಗೆಗೆ ಬಳಸುವ ಸಾಮಗ್ರಿಗಳನ್ನು ನೀಡಲಾಗಿದೆ.