ಕಲಬುರಗಿ:ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದಾಗಿ ನದಿ ತೀರದ ಗ್ರಾಮಗಳಾದ ಇಂಚಗೇರಿ, ಘತ್ತರಗಾ, ಕೊಳ್ಳೂರ, ಸೊನ್ನ ಸೇರಿದಂತೆ ಸುತ್ತಲು ಹಲವು ಹಳ್ಳಿಗಳ ಸಂತ್ರಸ್ತರಿಗೆ ಅಫಜಲಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಶ್ರಯ ನೀಡಲಾಗಿದೆ.
'ಉಟ್ಟ ಬಟ್ಟಿಮ್ಯಾಲೆ ಮನಿ ಬಿಟ್ಟ ಬಂದೇವ್ರಿ; ಇಷ್ಟದಿನ ಕೂಲಿ ಮಾಡಿದ್ದು ನೀರಾಗ್ ಕೊಚ್ಚಿಕೊಂಡ್ ಹೋಗೇತ್ರಿ' - Floods along the banks of the Bhima river
ಮನೆ ಕಳೆದುಕೊಂಡ ಸಂತ್ರಸ್ತರ ಗೋಳು ಹೇಳತೀರದಾಗಿದೆ. ಏಕಾಏಕಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನರು ಉಟ್ಟ ಬಟ್ಟೆಯ ಮೇಲೆ ಗ್ರಾಮಗಳನ್ನು ತೊರೆದು ಬಂದಿದ್ದಾರೆ. ರೈತರು ಬೆಳೆದ ಬೆಳೆಗಳೆಲ್ಲಾ ಜಲಾವೃತವಾಗಿದ್ದು, ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮನೆ ಕಳೆದುಕೊಂಡ ಸಂತ್ರಸ್ತರ ಗೋಳು ಹೇಳತಿರದಾಗಿದೆ. ಏಕಾಏಕಿ ನೀರು ಮನೆಗಳಿಗೆ ನುಗ್ಗಿದ್ದರಿಂದ ಜನರು ಉಟ್ಟ ಬಟ್ಟೆಯ ಮೇಲೆ ಗ್ರಾಮಗಳನ್ನು ತೊರೆದು ಬಂದಿದ್ದಾರೆ. ರೈತರು ಬೆಳೆದ ಬೆಳೆಗಳೆಲ್ಲಾ ಜಲಾವೃತವಾಗಿದ್ದು, ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರತಿ ಬಾರಿಯೂ ಮಳೆ ಬಂದರೆ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಆಸ್ವಾಸನೆ ನೀಡಿ ಹೋಗುತ್ತಾರೆ. ಆದರೆ ಇಲ್ಲಿಯವರೆಗೂ ಯಾವುದೇ ಶಾಶ್ವತ ಪರಿಹಾರ ಒದಗಿಸಿಲ್ಲ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಸಿ ತಮಗೆ ಸೂಕ್ತ ಪರಿಹಾರದ ಜೊತೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಸಂತ್ರಸ್ತರು ಒತ್ತಾಯಿಸಿದ್ದಾರೆ.