ಕರ್ನಾಟಕ

karnataka

ETV Bharat / state

ಕಲಬುರಗಿ : ಶ್ರೀ ದತ್ತಾತ್ರೇಯ ದೇವಸ್ಥಾನದ ಐವರು ಅರ್ಚಕರ ವಿರುದ್ಧ ಎಫ್​ಐಆರ್

ಅನಧಿಕೃತ ವೆಬ್​ಸೈಟ್​ ಮೂಲಕ ದೇವರ ಹೆಸರಿನಲ್ಲಿಯೇ ಭಕ್ತರಿಗೆ ಪಂಗನಾಮ ಹಾಕಿರುವ ಐವರು ಅರ್ಚಕರ ವಿರುದ್ಧ ಎಫ್ಐಆರ್ ದಾಖಲಾಗಿದೆ..

FIR against five priests of kalaburagi Dattatreya Temple
ದತ್ತಾತ್ರೇಯ ದೇವಸ್ಥಾನದ ಐವರು ಅರ್ಚಕರ ವಿರುದ್ಧ ಎಫ್​ಐಆರ್

By

Published : Jun 24, 2022, 3:42 PM IST

Updated : Jun 24, 2022, 4:22 PM IST

ಕಲಬುರಗಿ: ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇಗುಲದ ಹೆಸರಿನಲ್ಲಿ ನಕಲಿ/ಅನಧಿಕೃತ ವೆಬ್‌ಸೈಟ್‌ ಸೃಷ್ಟಿಸಿ ಹಣ ಹೊಡೆದ ಆರೋಪದಡಿ ದೇವಸ್ಥಾನದ ಐವರು ಅರ್ಚಕರ ವಿರುದ್ಧ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅರ್ಚಕರಾದ ವಲ್ಲಭ ದಿನಕರ್ ಭಟ್, ಅಂಕೂರ್ ಪೂಜಾರಿ, ಪ್ರತೀಕ್ ಪೂಜಾರಿ, ಗಂಗಾಧರ್ ಪೂಜಾರಿ, ಶರತ್ ಭಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅರ್ಚಕರ ವಿರುದ್ಧ ಎಫ್​ಐಆರ್-ಡಿಸಿ, ಎಸ್ಪಿ ಮಾಹಿತಿ ನೀಡಿರುವುದು..

ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ www.devalgangapur.com ಹೊರತುಪಡಿಸಿ ಎಂಟು ನಕಲಿ ವೆಬ್‌ಸೈಟ್‌ಗಳನ್ನು ಇವರು ಕ್ರಿಯೇಟ್ ಮಾಡಿದ್ದರು. ವೆಬ್‌ಸೈಟ್‌ ಮೂಲಕ ದೇವಸ್ಥಾನದ ಹುಂಡಿಗೆ ಬರುವ ಕಾಣಿಕೆಯನ್ನು ತಮ್ಮ ಜೇಬಿಗೆ ತುಂಬಿಸಿಕೊಂಡಿದ್ರು. ದೇಗುಲಕ್ಕೆ ಡಿಸಿ ಯಶವಂತ ಗುರುಕರ್ ಅವರು ಭೇಟಿ ನೀಡಿದ್ದ ವೇಳೆ ಅರ್ಚಕರ ಕಳ್ಳಾಟ ಬಯಲಾಗಿತ್ತು.

ಇದನ್ನೂ ಓದಿ:ಕಲಬುರಗಿ: ದೇವಲಗಾಣಗಾಪುರ ದತ್ತಾತ್ರೇಯ ದೇಗುಲದ ಅರ್ಚಕರ ವಿರುದ್ಧ ವಂಚನೆ ಪ್ರಕರಣ

ಸದ್ಯ ವಂಚಕ ಅರ್ಚಕರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ಡಿಸಿ ಯಶವಂತ ಗುರುಕರ್ ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸೆನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ಎಸ್ಪಿ ಇಶಾ ಪಂಥ್ ತಿಳಿಸಿದ್ದಾರೆ.

Last Updated : Jun 24, 2022, 4:22 PM IST

ABOUT THE AUTHOR

...view details