ಕಲಬುರಗಿ:ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕೆಗೆ ಕೊರೊನಾ ಸೋಂಕು ತಗುಲಿದ್ದು, ಸಹಪಾಠಿಗಳಿಗೆ ಸೋಂಕು ತಗಲುವ ಆತಂಕ ಎದುರಾಗಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕೆಗೆ ಕೊರೊನಾ ಸೋಂಕು - ಉದ್ಯೋಗ ಖಾತ್ರಿ ಯೋಜನೆ
ಇಂಗಳಗಿ ಗ್ರಾಮದ ಬರಗಾಲ್ ಚಾಳಿ ನಿವಾಸಿ 43 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಆಕೆಯ ಜೊತೆ ಕೆಲಸ ನಿರ್ವಹಿಸುತ್ತಿದ್ದ 200 ಜನರಲ್ಲಿ ಈಗಾಗಲೇ 179 ಜನರ ಗಂಟಲು ದ್ರವ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಗಳಗಿ ಗ್ರಾಮದ ಬರಗಾಲ್ ಚಾಳಿ ನಿವಾಸಿ 43 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಸೋಂಕು ತಗುಲಿರುವ ಮಹಿಳೆ ಪಕ್ಕದ ಮನೆಯಲ್ಲಿ ಮುಂಬೈನಿಂದ ಬಂದವರಲ್ಲಿ ಸೋಂಕು ಕಂಡುಬಂದಿತ್ತು. ಈ ಬಡಾವಣೆ ಸೀಲ್‌ಡೌನ್ ಮಾಡಿ ಪಕ್ಕದ ಮನೆಯ ಈ ಮಹಿಳೆಗೆ ಹೋಮ್ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದ್ರೆ ಉದ್ಯೋಗ ಖಾತ್ರಿಯಲ್ಲಿ ಗ್ರಾಮದ ನದಿಯಲ್ಲಿ ನಡೆದಿರುವ ಹೂಳೆತ್ತುವ ಕೆಲಸಕ್ಕೆ ಮಹಿಳೆ ಹಾಜರಾಗಿದ್ದಾಳೆ. ಇದೀಗ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತ ಮಹಿಳೆಯೊಂದಿಗೆ ಕೆಲಸ ಮಾಡುತ್ತಿದ್ದ 200 ಕಾರ್ಮಿಕರಿಗೆ ಸೋಂಕು ತಗುಲುವ ಆತಂಕ ಎದುರಾಗಿದೆ.
ಸದ್ಯ ಕೆಲಸ ಸ್ಥಗಿತಗೊಳಿಸಲಾಗಿದ್ದು, 200 ಜನರಿಗೆ ಹೋಮ್ ಕ್ವಾರಂಟೈನ್ ಸೂಚಿಸಲಾಗಿದೆ. ಸೋಂಕಿತ ಮಹಿಳೆಯೊಂದಿಗೆ ಕೆಲಸ ಮಾಡಿದ 200 ಜನರಲ್ಲಿ ಈಗಾಗಲೇ 179 ಜನರ ಗಂಟಲು ದ್ರವ ಪರೀಕ್ಷೆಗೆ ರವಾನಿಸಲಾಗಿದೆ. ಇಂದು ಅಥವಾ ನಾಳೆ ವರದಿ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.