ಕಲಬುರಗಿ:ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಲ್ಲಿಕಾರ್ಜುನ ಖರ್ಗೆಗೆ ಬೆಂಬಲಿಸಿ ಮಾದಿಗ ಸಮುದಾಯದ ಸಮಾವೇಶ ಏರ್ಪಡಿಸಲಾಗಿತ್ತು.
ನಗರದ ವೀರಶೈವ ಕಲ್ಯಾಣ ಮಂಟಪದ ಎದುರುಗಡೆ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಖರ್ಗೆ, ಸಂವಿಧಾನ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ. ಅದು ನನ್ನ ಕರ್ತವ್ಯ ಕೂಡ ಹೌದು. ಕೆಲ ದಿನಗಳ ಹಿಂದೆ ಕೆಲವರು ದೇಶ ಬಿಟ್ಟು ಹೋಗುವ ಮಾತನಾಡಿದರು. ಆದರೆ, ಅಂಬೇಡ್ಕರ್ ಅವರಿಗೆ ಅನ್ಯಾಯವಾದಾಗ ಯಾರೂ ಹಾಗೆ ಹೇಳಿರಲಿಲ್ಲ. ಬಿಜೆಪಿಯವರು ಶೋಷಿತರನ್ನು ನುಂಗಿ ಜೀವಿಸುವ ಹುನ್ನಾರ ಹೊಂದಿದ್ದಾರೆ. ಸಮಾನ ಹಕ್ಕುಗಳನ್ನು ದೇಶದ ನಾಗರಿಕರಿಗೆ ಒದಗಿಸಿರುವ ಸಂವಿಧಾನವನ್ನೇ ಬದಲಿಸುವ ಮಾತನಾಡುತ್ತಾರೆ. ಬಿಜೆಪಿಯ ಅಂತಹ ನಾಯಕರನ್ನು ಮೋದಿ ಖಂಡಿಸಲಿಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.