ಕರ್ನಾಟಕ

karnataka

ETV Bharat / state

Black Fungus: ಕಲಬುರಗಿಯಲ್ಲಿ ಕೊರೊನಾ ಕಮ್ಮಿಯಾಗುತ್ತಲೇ ಕರಿ ಮಾರಿ ಕಾಟ ಹೆಚ್ಚಳ!

ಕಲಬುರಗಿ ಜಿಲ್ಲೆ ಕೊರೊನಾದಿಂದ ಸಂಪೂರ್ಣ ಮುಕ್ತವಾಗುತ್ತ ದಾಪುಗಾಲು ಇಡೋ ಮಧ್ಯೆ ಇದೀಗ ಬ್ಲ್ಯಾಕ್ ಫಂಗಸ್ ಕಾಯಿಲೆಯಿಂದ ಜಿಲ್ಲಾಡಳಿತಕ್ಕೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಕರಿ ಮಾರಿ ಕಾಯಿಲೆ ಹೋಗಲಾಡಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುತ್ತಿರುವುದು ಕೊಂಚ ನೆಮ್ಮದಿ ಮೂಡಿಸಿದೆ.

Kalburagi
Kalburagi

By

Published : Jun 13, 2021, 9:28 AM IST

ಕಲಬುರಗಿ:ದೇಶದಲ್ಲಿ ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿತ್ತು. ಕೊರೊನಾ ಮೊದಲ ಅಲೆಯಲ್ಲಿ ಬೆಂದು ಬಸವಳಿದಿದ್ದ ಜಿಲ್ಲೆಗೆ ಎರಡನೇ ಅಲೆ ಮತ್ತೆ ಶಾಕ್ ನೀಡಿತ್ತು. ಇದೀಗ ಕೊರೊನಾ ಮುಕ್ತ ಜಿಲ್ಲೆಯಾಗುವತ್ತ ದಾಪುಗಾಲಿಟ್ಟಿದ್ದು, ಕೊರೊನಾ ಕಮ್ಮಿಯಾಗ್ತಿರೋ ಖುಷಿ ವಿಚಾರದ ಮಧ್ಯೆ ಮತ್ತೊಂದು ಸಂಕಟ ಎದುರಾಗಿದೆ.

ಕಲಬುರಗಿಯಲ್ಲಿ ಸೋಂಕು ಹೆಚ್ಚಳದ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ

ಕೋವಿಡ್ ವೈರಾಣುವಿನ ಎರಡನೇ ಏಟಿಗೆ ಸುಸ್ತಾಗಿದ್ದ ಕಲಬುರಗಿ ಜಿಲ್ಲೆ ಪಾಸಿಟಿವ್ ರೇಟ್‌ನಲ್ಲಿ ರಾಜ್ಯದಲ್ಲಿ ಟಾಪ್‌ನಲ್ಲಿತ್ತು. ಜಿಲ್ಲೆಯಲ್ಲಿ ನಿತ್ಯವು 500ಕ್ಕೂ ಅಧಿಕ ಪಾಸಿಟಿವ್ ಪ್ರಕರಣ ಬರುತ್ತಿತ್ತು. ಆದರೆ ಇದೀಗ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 30ನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್, ಸೊಂಕಿತರಿಗೆ ಸೂಕ್ತ ಚಿಕಿತ್ಸೆ, ಕೊರೊನಾ ‌ನಿಯಮಾವಳಿಗಳ ಪಾಲನೆ ಸೇರಿದಂತೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಕೈ ಜೋಡಿಸಿದ್ದರಿಂದ ಕೊರೊನಾ ಸಂಪೂರ್ಣ ಇಳಿಮುಖವಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ.

ಇನ್ನು ಜಿಲ್ಲೆಯಲ್ಲಿ ಒಂದು ಕಡೆ ಕೊರೊನಾ ಅಟ್ಟಹಾಸಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿ ನಿಟ್ಟುಸಿರು ಬಿಟ್ಟರೆ, ಇತ್ತ ಕರಿ ಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೆ. ಜಿಲ್ಲೆಯಲ್ಲಿ 140 ಜನ ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿದ್ದು, 40 ಜನ ಮಹಿಳೆಯರಿಗೆ ಬ್ಲ್ಯಾಕ್ ಫಂಗಸ್ ವಕ್ಕರಿಸಿದೆ. 100ಕ್ಕೂ ಅಧಿಕ ಪುರುಷರು ಫಂಗಸ್‌ನಿಂದ ಬಳಲುತ್ತಿದ್ದಾರೆ. ಅಂದರೆ ಮಹಿಳೆಯರಿಗಿಂತ ಹೆಚ್ಚು ಪುರುಷರಿಗೆ ಬ್ಲ್ಯಾಕ್ ಫಂಗಸ್ ಕಾಯಿಲೆ ವಕ್ಕರಿಸುತ್ತಿರುವುದು ಆತಂಕಕ್ಕೀಡು ಮಾಡಿದೆ. ಇನ್ನು ಕಪ್ಪು ಶಿಲೀಂಧ್ರ ಕಾಯಿಲೆಗೆ ಜಿಲ್ಲೆಯಲ್ಲಿ 17 ಜನ ಬಲಿಯಾಗಿದ್ದು, ಆಕ್ಸಿಜನ್ ಮತ್ತು ಸ್ಟೈರಾಯ್ಡ್ ಚಿಕಿತ್ಸೆ ಪಡೆಯುದವುದರಿಂದ ಬ್ಲ್ಯಾಕ್ ಫಂಗಸ್ ಕಾಯಿಲೆ ಕಾಣಿಸಿಕೊಳ್ಳುತ್ತಿದೆ ಅಂತಾ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಲಸಿಕೆ ಪಡೆಯಲು ಹಳ್ಳಿಗರ ಹಿಂದೇಟು:

ಕೊರೊನಾ ಜಿಲ್ಲೆಯಲ್ಲಿ ಅಬ್ಬರಿಸಿದ್ರು ಲಸಿಕೆ ಪಡೆಯಲು ಹಳ್ಳಿಗರು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 12 ಗ್ರಾಮಗಳು, 15 ತಾಂಡಾಗಳಲ್ಲಿ ಒಬ್ಬ ವ್ಯಕ್ತಿಯೂ ಲಸಿಕೆ ಹಾಕಿಸಿಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವ್ಯಾಕ್ಸಿನ್ ಕುರಿತು ಎಷ್ಟೇ ಜಾಗೃತಿ ಮೂಡಿಸಿದ್ರು ಸಹ ಹಳ್ಳಿ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ತಪ್ಪು ಕಲ್ಪನೆಯಿಂದಾಗಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆಯದ ಹಳ್ಳಿಗರಿಗೆ ವ್ಯಾಕ್ಸಿನ್ ವಿತರಣೆಗೆ ಪ್ಲಾನ್ ಮಾಡಲಾಗಿದೆ‌. ಎರಡು ಬಸ್ ಬಳಸಿಕೊಂಡು ವ್ಯಾಕ್ಸಿನೇಷನ್​ಗೆ ಸಿದ್ಧತೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಕೇವಲ 3 ಲಕ್ಷ ಜನರಿಗೆ ಮಾತ್ರ ವ್ಯಾಕ್ಸಿನೇಷನ್‌ ಮಾಡಲಾಗಿದೆ. ನಿರೀಕ್ಷಿತ ಗುರಿ ತಲುಪಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details