ಕರ್ನಾಟಕ

karnataka

ETV Bharat / state

ಕೋವಿಡ್​ ಸಂಕಷ್ಟದಲ್ಲಿ ಕೆಲಸ ಮಾಡುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ: ಭಾಸ್ಕರ್ ರಾವ್

ಕೋವಿಡ್​ ಸಂಕಷ್ಟ ಸಮಯದಲ್ಲಿಯೂ ಧೃತಿಗೆಡದೆ ಕೆಲಸ ಮಾಡುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಬೆಂಗಳೂರು ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

Bhaskar Rao distributes food  kit
ಆಹಾರ ಧಾನ್ಯ ಕಿಟ್ ವಿತರಿಸಿದ ಭಾಸ್ಕರ್ ರಾವ್

By

Published : May 29, 2021, 8:43 AM IST

ಕಲಬುರಗಿ:ಜನರಿಗಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಜನರು ಸಹ ಸಹಕರಿಸಿ, ಕೊರೊನಾ ಮಹಾಮಾರಿಯನ್ನು ತಡೆಗಟ್ಟಬೇಕಿದೆ. ಕಳೆದ 48 ದಿನಗಳಲ್ಲಿ 48 ಜನ ಪೊಲೀಸರು ಮೃತಪಟ್ಟಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಇಂತಹ ಸಂಕಷ್ಟ ಸಮಯದಲ್ಲಿಯೂ ಧೃತಿಗೆಡದೆ ಕೆಲಸ ಮಾಡುತ್ತಿರುವ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ಬೆಂಗಳೂರು ರೈಲ್ವೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಆಹಾರ ಧಾನ್ಯಗಳ ಕಿಟ್ ವಿತರಿಸಿದ ಭಾಸ್ಕರ್ ರಾವ್

ಕಲಬುರಗಿ ನಗರಕ್ಕೆ ಭೇಟಿ ನೀಡಿದ ಅವರು ರೈಲ್ವೆ ಪೊಲೀಸ್ ಠಾಣೆ ಪರೀಶಿಲನೆ ಮಾಡಿದರು. ಬಳಿಕ ಕೊರೊನಾದಂತಹ ಸಂಕಷ್ಟದಲ್ಲಿ ಧೈರ್ಯಗೆಡದೆ ಜನರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ರೈಲ್ವೆ ಇಲಾಖೆ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.

ಬಳಿಕ ಕಲಬುರಗಿ, ವಾಡಿ ಹಾಗೂ ಬೀದರ್‌ ನಗರದ ರೈಲ್ವೆ ಪೊಲೀಸ್ ಠಾಣೆಗಳ ಪರಿಶೀಲನೆ ಮಾಡಿ ರೈಲ್ವೆ ನಿಲ್ದಾಣ ಬಳಿ ಜಿ.99 ಹಾಗೂ ಶ್ರೀ ಶರಣಬಸವೇಶ್ವರ ಟ್ರಸ್ಟ್ ನೀಡಿದ ದಿನಸಿ ಕಿಟ್ ವಿತರಣೆ ಮಾಡಿದರು.

ಓದಿ:ಕೋವಿಡ್​ ರೋಗಿಗಳಿಗೆ ಬೇಕಾಬಿಟ್ಟಿ ಮಾತ್ರೆ.. ಮಂಡ್ಯ ವೈದ್ಯನ ಎಡವಟ್ಟಿನಿಂದ 15 ಜನ ಸಾವು ಆರೋಪ!

ABOUT THE AUTHOR

...view details