ಕಲಬುರಗಿ:ವಿದ್ಯುತ್ ಶಾಕ್ಗೊಳಗಾದ ಮಹಿಳೆಯ ರಕ್ಷಣೆಗೆ ಹೋದ ಯುವಕನೇ ವಿದ್ಯುತ್ ಅವಘಡಕ್ಕೆ ಬಲಿಯಾದ ದಾರುಣ ಘಟನೆ ಜಿಲ್ಲೆಯ ಹೀರಾಪುರ ನಗರದಲ್ಲಿ ನಡೆದಿದೆ.
ವಿದ್ಯುತ್ ಶಾಕ್ಗೊಳಗಾದ ಮಹಿಳೆಯ ರಕ್ಷಣೆಗೆ ಹೋದ ಯುವಕನೇ ಅವಘಡಕ್ಕೆ ಬಲಿ..!
ವಿದ್ಯುತ್ ಶಾಕ್ಗೊಳಗಾದ ಮಹಿಳೆಯ ರಕ್ಷಣೆಗೆ ಹೋದ ಯುವಕನೇ ವಿದ್ಯುತ್ ಅವಘಡಕ್ಕೆ ಬಲಿಯಾದ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಹೀರಾಪುರ ನಗರದಲ್ಲಿ ನಡೆದಿದೆ.
ಹೀರಾಪುರ ಗ್ರಾಮದ ನಿವಾಸಿ ಮಧುಕರ್ ಜಾಪೂರ (30) ಮೃತ ಯುವಕ. ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆದರೆ ಅದನ್ನು ಗಮನಿಸದ ಮಹಿಳೆಯೋರ್ವರು ಬಹಿರ್ದೆಸೆಗೆಂದು ತೆರಳಿದ್ದರು. ಅಲ್ಲಿ ಆ ಮಹಿಳೆಗೆ ವಿದ್ಯುತ್ ಶಾಕ್ ತಗುಲಿದೆ. ಇದನ್ನು ಗಮನಿಸಿದ ಮಧುಕರ ಆಕೆಯನ್ನು ರಕ್ಷಿಸಲೆಂದು ಮುಂದಾಗಿದ್ದಾನೆ. ಆದರೆ ದುರಾದೃಷ್ಟವೆಂಬಂತೆ ಆತನೇ ಸಾವನ್ನಪ್ಪಿದ್ದಾನೆ.
ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಮಧುಕರನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಈ ಘಟನೆಗೆ ಜೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯ ಎಂದು ಜನರು ಆರೋಪಿಸದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.