ಕಲಬುರಗಿ: ಇದು ಪವಾಡಾನೋ ಇಲ್ಲ ಅದೃಷ್ಟಾನೋ ಗೊತ್ತಿಲ್ಲ. ಮಲಗಿದ ಮಹಿಳೆ ಮೇಲೆ ನಾಗರ ಹಾವೊಂದು ಹೆಡೆಯತ್ತಿ ಸುಮಾರು ಹೊತ್ತು ಕುಳಿತಿದೆ. ಹಾವು ಮೈ ಮೇಲೆ ಕುಳಿತ ಮೇಲೆ ಎಚ್ಚರಗೊಂಡ ಮಹಿಳೆ ಭಯಭೀತಳಾಗಿ ದೇವರ ನಾಮಜಪ ಮಾಡಿದ್ದಾಳೆ. ಪವಾಡ ಎಂಬಂತೆ ನಾಗರ ಹಾವು ಮಹಿಳೆಗೆ ಏನು ಮಾಡದೇ ಮೈಮೇಲಿಂದ ಇಳಿದು ತನ್ನಷ್ಟಕ್ಕೆ ತಾನು ಹೊರಟು ಹೋಗಿದೆ. ಈ ಎಲ್ಲ ದೃಶ್ಯ ಸ್ಥಳಿಯರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.
ಮಲಗಿದ ಮಹಿಳೆ ಮೇಲೆ ಹೆಡೆಎತ್ತಿ ಕುಳಿತ ನಾಗರಹಾವು ಮಹಿಳೆ ಮೈ ಮೇಲೇರಿ ಕುಳಿತ ನಾಗ: ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಇಂತಹದ್ದೊಂದು ವಿಚಿತ್ರ ಹಾಗೂ ಪವಾಡ ರೀತಿಯ ಘಟನೆ ನಡೆದಿದೆ. ಜಮೀನು ಅಂದ್ಮೇಲೆ ಹಾವುಗಳು ಕಾಣುವುದು ಸಾಮಾನ್ಯ. ಜಮೀನಿನಲ್ಲಿದ್ದ ಮಂಚದ ಮೇಲೆ ಭಾಗಮ್ಮ ಬಡದಾಳ ಎಂಬ ಮಹಿಳೆ ಮಲಗಿ ನಿದ್ರೆಗೆ ಜಾರಿದ್ದರು. ಈ ವೇಳೆ, ನಾಗರ ಹಾವೊಂದು ನೇರವಾಗಿ ಮಹಿಳೆ ಮೈ ಏರಿ ಕುಳಿತು ಹೆಡೆ ಎತ್ತಿದೆ.
ಮಲಗಿದ ಮಹಿಳೆ ಮೇಲೆ ಹೆಡೆಎತ್ತಿ ಕುಳಿತ ನಾಗರಹಾವು ಶ್ರೀಶೈಲ ಮಲ್ಲಿಕಾರ್ಜುನ ಜಪ ಮಾಡಿದ ಮಹಿಳೆ: ವಿಷ ಸರ್ಪ ಕಂಡರೆ ಹೌಹಾರಿ ಮಾರುದ್ದ ಓಡುವುದು ಮನುಷ್ಯನ ಸಹಜ ಗುಣ. ಹೀಗಿರುವಾಗ ಮೈ ಮೇಲೆ ಸುಮಾರು ಆರು ಅಡಿ ಉದ್ದದ ನಾಗರಹಾವು ಹೆಡೆ ಎತ್ತಿ ಕುಳಿತರೆ ಆ ಮಹಿಳೆಯ ಸ್ಥಿತಿ ಏನಾಗಿರಬಾರದು ಅನ್ನೋದನ್ನು ಉಹಿಸಿದರೆ ಭಯವಾಗುತ್ತೆ. ಆದ್ರೆ ಭಾಗಮ್ಮ ಭಯವನ್ನು ತನ್ನ ಮನಸ್ಸಿನಲ್ಲಿ ಬಚ್ಚಿಟ್ಟು ದೇವರ ನಾಮಸ್ಮರಣೆ ಮಾಡಿದ್ದಾರೆ. 'ಹೇ ಮಲ್ಲಯ್ಯ, ಶ್ರೀಶೈಲ್ ಮಲ್ಲಯ್ಯ, ಸ್ವಾಮಿ ಕಾಪಾಡು ನನ್ನಪ್ಪ, ನೀ ಮಾಯವಾಗೋ ನನ್ನಪ್ಪ, ಹೇ ಮಲ್ಲಯ್ಯ, ಹೇ ಮಲ್ಲಯ್ಯ, ಹೇ ಮಲ್ಲಯ್ಯ ಅಂತೇಲ್ಲಾ ದೇವರ ನಾಮಜಪ ಮಾಡಿದ್ದಾರೆ.
ಮಲಗಿದ ಮಹಿಳೆ ಮೇಲೆ ಹೆಡೆಎತ್ತಿ ಕುಳಿತ ನಾಗರಹಾವು ಮಹಿಳೆಗೆ ಕಚ್ಚದೇ ನಿರ್ಗಮಿಸಿದ ನಾಗಪ್ಪ: ದೇವರ ನಾಮಜಪ ಮಾಡುತ್ತ ಮಹಿಳೆ ಅಲ್ಲಿಯೇ ಕಣ್ಮುಚ್ಚಿದ್ದಾರೆ. ಈ ವೇಳೆ, ಮಹಿಳೆಗೆ ಏನು ಹಾನಿ ಮಾಡದೇ ನಾಗರಾಜ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದು ಅದೃಷ್ಟಾನೋ, ಪವಾಡಾನೋ ಸದ್ಯ ವಿಡಿಯೋ ಪುಲ್ ವೈರಲ್ ಆಗುತ್ತಿದ್ದು, ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಓದಿ:25 ವರ್ಷದಿಂದ ಹಾವಿನ ದಾಳಿಗೆ ಒಳಗಾದ ಕುಟುಂಬ.. ಹಾವು ಕಚ್ಚಿದ 11 ಮಂದಿಯಲ್ಲಿ ಐವರು ಸಾವು