ಕರ್ನಾಟಕ

karnataka

ETV Bharat / state

ಸೇತುವೆ ಅಂಚಿಗೆ ಬಂದು ನಿಂತ ಸಾರಿಗೆ ಬಸ್​​​... ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ - ಬಸ್ ಡಿಪೋ

ಕೂದಲೆಳೆಯ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 50 ಜನರು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಅಂಚಿಗೆ ಬಂದು ನಿಂತ ಸಾರಿಗೆ ಬಸ್

By

Published : Jun 19, 2019, 11:54 AM IST

ಕಲಬುರಗಿ:ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಅಂಚಿಗೆ ಸಾರಿಗೆ ಬಸ್​ವೊಂದು ಬಂದು ನಿಂತಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿದ ಘಟನೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.

ಎಮರ್ಜೆನ್ಸಿ ಎಕ್ಸಿಟ್ ಡೋರ್​ನಿಂದ ಹೊರಗೆ ಜಿಗಿದು ಪ್ರಾಣ ರಕ್ಷಿಸಿಕೊಳ್ಳುತ್ತಿರುವ ಪ್ರಯಾಣಿಕರು

ಚಿಂಚೋಳಿ - ಬಾಲ್ಕಿ ರಾಜ್ಯ ಹೆದ್ದಾರಿ 75ರಲ್ಲಿ ಚಿಂಚೋಳಿ ಡಿಪೋ ಬಸ್ ಸುಮಾರು 50 ಜನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಘಟನೆ ನಡೆದಿದೆ. ಎದುರಿಗೆ ಲಾರಿಯೊಂದು ಅಡ್ಡಾದಿಡ್ಡಿಯಾಗಿ ಅತಿ ವೇಗವಾಗಿ ಹೋಗುತ್ತಿತ್ತು ಎನ್ನಲಾಗಿದೆ. ಆಗ ಅಪಘಾತ ಆಗುವುದನ್ನು ತಡೆಯಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಅಂಚಿಗೆ ಬಂದು ನಿಂತ ಸಾರಿಗೆ ಬಸ್

ಸೇತುವ ಅಂಚಿನಲ್ಲಿ ನಿಂತಿದ್ದರಿಂದ ಬಸ್ ಡೋರ್ ತೆರೆಯಲು ಕೂಡ ಅವಕಾಶವಿರಲಿಲ್ಲ. ಇದರಿಂದಾಗಿ ಭಯಭೀತರಾದ ಪ್ರಯಾಣಿಕರು ಎಮರ್ಜೆನ್ಸಿ ಎಕ್ಸಿಟ್ ಡೋರ್​ನಿಂದ ಹೊರಗೆ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಸ್ಥಳದಲ್ಲಿ ಕೆಲಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಬಸ್​ನಿಂದ ಹೊರಬಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಲಾರಿ ಚಾಲಕನ ವಿರುದ್ಧ ಹಿಡಿಶಾಪ ಕೂಡ ಹಾಕಿದ್ದಾರೆ.

ABOUT THE AUTHOR

...view details