ಕಲಬುರಗಿ: ಜೋಳಿಗೆಯಲ್ಲಿ ಮಲಗಿಸಿದ್ದ 9 ತಿಂಗಳ ಮಗು ನಾಪತ್ತೆಯಾದ ಘಟನೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ ವಕ್ರಾಣಿ ಎಂಬ ಮಹಿಳೆಯ 9 ತಿಂಗಳ ಮಗ ಬೀರಪ್ಪ ನಾಪತ್ತೆಯಾದ ಕಂದಮ್ಮ. ಎಂದಿನಂತೆ ಕೂಲಿ ಕೆಲಸಕ್ಕೆ ತೆರಳಿದ ಶಾಂತಮ್ಮ, ಮರಕ್ಕೆ ಸೀರೆಯಿಂದ ಜೋಳಿಗೆ ಕಟ್ಟಿ ಮಗುವನ್ನು ಮಲಗಿಸಿ, ಹೊಲದಲ್ಲಿ ಕಳೆ ಕೀಳುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ನೀರು ಕುಡಿಯಲು ಗಿಡದ ಹತ್ತಿರ ಬಂದು ಜೋಳಿಗೆ ಕಡೆ ನೋಡಿದಾಗ ಮಗು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಜೋಳಿಗೆಯಲ್ಲಿದ್ದ ಮಗು ನಾಪತ್ತೆ.. ಹೆತ್ತ ಕರುಳು ಬಳ್ಳಿ ಕಳೆದುಕೊಂಡು ತಾಯಿ ಕಣ್ಣೀರು - ತಾಯಿ ಕಣ್ಣೀರು
ಮರಕ್ಕೆ ಸೀರೆಯಿಂದ ಜೋಳಿಗೆ ಕಟ್ಟಿ 9 ತಿಂಗಳ ಮಗುವನ್ನ ಮಲಗಿಸಿ, ತಾಯಿ ಹೊಲದಲ್ಲಿ ಕಳೆ ಕೀಳುತ್ತಿದ್ದ ವೇಳೆ ಯಾರೋ ಮಗು ಕಳ್ಳತನ ಮಾಡಿರುವ ಘಟನೆ ಕಲಬುರಗಿಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದೆ.
ಮಗು ಕಾಣದಿದ್ದಾಗ ಗಾಬರಿಯಾದ ಶಾಂತಮ್ಮ ಎಲ್ಲ ಕಡೆಗೆ ಹುಡುಕಿದ್ದಾರೆ. ಜೊತೆಗೆ ಕೆಲಸ ಮಾಡುವವರು, ಅಕ್ಕ ಪಕ್ಕದ ಹೊಲದಲ್ಲಿದ್ದವರು ಎಲ್ಲರೂ ಒಟ್ಟಾಗಿ ಹುಡುಕಿದರೂ ಮಗು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಮಗುವನ್ನು ಯಾರೋ ಕದ್ದು ಎತ್ತಿಕೊಂಡು ಹೋಗಿರುವಂತೆ ಕಂಡು ಬಂದಿದೆ. ಮಗು ಕಳೆದುಕೊಂಡ ತಾಯಿಯ ಅಕ್ರಂದನ ಮುಗಿಲು ಮುಟ್ಟಿದ್ದು, ಇದು ಮಕ್ಕಳು ಕಳ್ಳರ ಕೈಚಳಕ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗು ಪತ್ತೆ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ:ಮಾತು ಬರಲ್ಲ, ನಡೆಯಲೂ ಸಾಧ್ಯವಿಲ್ಲ ಎಂದು ತಿಳಿದ ತಾಯಿಯಿಂದ ಮಗುವಿನ ಕೊಲೆ!