ಕರ್ನಾಟಕ

karnataka

ETV Bharat / state

ಗುಲ್ಬರ್ಗಾ ವಿವಿ ಘಟಿಕೋತ್ಸವ: ರೈತನ ಮಗಳಿಗೆ 11 ಚಿನ್ನದ ಪದಕ!

ಗುಲ್ಬರ್ಗಾ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸಮಾರಂಭ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಜರುಗಿದ್ದು, ಸಮಾರಂಭದಲ್ಲಿ 82 ವಿದ್ಯಾರ್ಥಿಗಳಿಗೆ 175 ಚಿನ್ನದ ಪದಕ, 157 ವಿದ್ಯಾರ್ಥಿಗಳಿಗೆ ಪಿಹೆಚ್​ಡಿ ಪದವಿ ಪ್ರದಾನ ಮಾಡಲಾಯಿತು.

38th-convocation-ceremony-of-gulbarga-university
ರೈತನ ಮಗಳಿಗೆ 11 ಚಿನ್ನದ ಪದಕ!

By

Published : Nov 20, 2020, 5:46 PM IST

ಕಲಬುರಗಿ:ಕೋವಿಡ್​ ಹಿನ್ನೆಲೆ ಗುಲ್ಬರ್ಗಾ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸರಳವಾಗಿ ನಡೆಯಿತು. ಡಾ. ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಘಟಿಕೋತ್ಸವವನ್ನು ಪ್ರಭಾರ ಕುಲಪತಿ ಚಂದ್ರಕಾಂತ ಯಾತನೂರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಂತ್ರಾಲಯದಲ್ಲಿ ನಡೆಯಲಿರುವ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶ್ರೀರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಭುದೇಂದ್ರತೀರ್ಥ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

82 ವಿದ್ಯಾರ್ಥಿಗಳಿಗೆ ಚಿನ್ನದ ಪದಕ:ಸಮಾರಂಭದಲ್ಲಿ 82 ವಿದ್ಯಾರ್ಥಿಗಳಿಗೆ 175 ಚಿನ್ನದ ಪದಕ, 157 ವಿದ್ಯಾರ್ಥಿಗಳಿಗೆ ಪಿಹೆಚ್​ಡಿ ಪದವಿ ಪ್ರದಾನ ಮಾಡಲಾಯಿತು. 15,029 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. ಪ್ರತಿ ವರ್ಷದಂತೆ ಈ ವರ್ಷ ಕೂಡ ಕನ್ನಡ, ಪ್ರಾಣಿಶಾಸ್ತ್ರ ಸೇರಿದಂತೆ ವಿವಿಧ ವಿಭಾಗದ ಯುವತಿಯರು ಹೆಚ್ಚು ಚಿನ್ನದ ಪದಕಗಳನ್ನು ಪಡೆದು ಗಮನ ಸೆಳೆದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವ

ಕನ್ನಡ ಪ್ರಾಧ್ಯಾಪಕಿಯಾಗುವಾಸೆ:ಕನ್ನಡ ವಿಭಾಗದ ವಿದ್ಯಾರ್ಥಿ ಜಯಶ್ರೀ ಯಳಸಂಗಿ 11 ಚಿನ್ನದ ಪದಕ ಪಡೆಯುವ ಮೂಲಕ ವಿವಿಗೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ನಾನು ಮೂಲತಃ ಮಾಡಿಯಾಳ ಗ್ರಾಮದವಳು. ತಂದೆ ಕೃಷಿ ಮಾಡುತ್ತಾರೆ. ಅವರು ಕಷ್ಟಪಟ್ಟು ಸಾಕಿದ್ದಲ್ಲದೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ನಾನು ಅವರಿಗೆ ಋಣಿಯಾಗಿರುವೆ ಎಂದ ಜಯಶ್ರೀ, ಕನ್ನಡ ಪ್ರಾಧ್ಯಾಪಕಿಯಾಗುವ ಕನಸು ಕಂಡಿದ್ದೇನೆ ಎಂದು ಹೇಳಿದರು.

10 ಚಿನ್ನದ ಪದಕ ವಿಜೇತೆ ಶ್ವೇತಾ ದೊಡ್ಡಮನಿ

ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದೇನೆ:10 ಚಿನ್ನದ ಪದಕ‌‌ ಪಡೆದಿರುವುದು ಖುಷಿ ತಂದಿದೆ. ನನ್ನ ತಾಯಿಯೇ ತಂದೆಯ ಸ್ಥಾನದಲ್ಲಿ ನಿಂತು ವಿದ್ಯಾಭ್ಯಾಸ ಕೊಡಿಸುವ ಮೂಲಕ ತಂದೆ ಇಲ್ಲ ಎಂಬ ಕೊರಗನ್ನು ದೂರ ಮಾಡಿದ್ದಾಳೆ. ಅವರ ಕನಸಿನಂತೆ ನಾನು ಐಎಎಸ್ ಅಧಿಕಾರಿಯಾಗುವೆ ಎಂದು ಸಂತಸ ಹಂಚಿಕೊಂಡರು ಪ್ರಾಣಿಶಾಸ್ತ್ರ ವಿದ್ಯಾರ್ಥಿನಿ ಶ್ವೇತಾ ದೊಡ್ಡಮನಿ.

ABOUT THE AUTHOR

...view details