ಕರ್ನಾಟಕ

karnataka

By

Published : May 14, 2020, 7:14 PM IST

ETV Bharat / state

ಹೊರ ರಾಜ್ಯದಿಂದ ಸೇಡಂಗೆ 300ರಿಂದ 400 ಜನ ಆಗಮನ: ಕ್ವಾರಂಟೈನ್ ಕೇಂದ್ರಗಳಲ್ಲಿ ಸಮಸ್ಯೆ​​

ಇಂದು ರಾತ್ರಿ ವಿವಿಧ ರಾಜ್ಯಗಳಿಂದ ರೈಲಿನಲ್ಲಿ ಸೇಡಂ ತಾಲೂಕಿಗೆ ಸುಮಾರು 300ರಿಂದ 400 ಜನ ಬರುತ್ತಿದ್ದಾರೆ. ಇವರನ್ನು ಕ್ವಾರಂಟೈನ್​ನಲ್ಲಿ ಇಡಲು ಸರ್ಕಾರಿ ವಸತಿ ನಿಲಯ, ಶಾಲಾ, ಕಾಲೇಜು ಕಟ್ಟಡಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದ್ರೆ ಬಹುತೇಕ ಕಟ್ಟಡಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕ್ವಾರಂಟೈನ್
ಕ್ವಾರಂಟೈನ್

ಸೇಡಂ(ಕಲಬುರಗಿ): ವಿವಿಧ ರಾಜ್ಯಗಳಿಂದ ಸಾವಿರಾರು ಜನ ರಾಜ್ಯಕ್ಕೆ ವಾಪಸ್​​ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚಿಸಿದೆ. ಇದಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ವಸತಿ ನಿಲಯ, ಶಾಲಾ, ಕಾಲೇಜು ಕಟ್ಟಡಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಆದರೆ ಬಹುತೇಕ ಕಟ್ಟಡಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೆಲವೆಡೆ ಕುಡಿಯಲು ನೀರಿಲ್ಲ, ಅನೇಕ ಕಡೆ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಇನ್ನೂ ಕೆಲವೆಡೆ ಇರುವ ವಸತಿ ನಿಲಯಗಳಲ್ಲಿ ಸಾಮೂಹಿಕ ಶೌಚಾಲಯಗಳಿವೆ. ಇದರಿಂದ ಕೊರೊನಾ ಹರಡುವ ಭೀತಿ ಒಂದೆಡೆಯಾದರೆ, ಮತ್ತೊಂದೆಡೆ ಕ್ವಾರಂಟೈನ್ ಕೇಂದ್ರಗಳ ದುಸ್ಥಿತಿ ಕಂಡು ಜನ ಇರಲು ಹಿಂಜರಿಯುತ್ತಿದ್ದಾರೆ.

ಪಟ್ಟಣದಲ್ಲಿರುವ ವಸತಿ ನಿಲಯಗಳ ಪೈಕಿ ಕೋಡ್ಲಾ ಕ್ರಾಸ್ ಬಳಿಯ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯದಲ್ಲಿ ಮಾತ್ರ ಕೋಣೆಗೊಂದು ಶೌಚಾಲಯವಿದೆ. ಇನ್ನುಳಿದೆಡೆ ಸಾಮೂಹಿಕವಾಗಿ ಶೌಚಾಲಯ ಬಳಕೆ ಅನಿವಾರ್ಯ. ಕ್ವಾರಂಟೈನ್ ಇದ್ದವರ ಪೈಕಿ ಒಬ್ಬರಲ್ಲಿ ಸೋಂಕು ಕಂಡು ಬಂದರೂ ಎಲ್ಲರಿಗೂ ತಗುಲುವ ಆತಂಕ ವ್ಯಕ್ತವಾಗಿದೆ.

ಹಾಸ್ಟೆಲ್​ಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿಸುತ್ತಿರುವ ಅಧಿಕಾರಿಗಳು, ವಸತಿ ನಿಲಯ ಹಾಗೂ ಶಾಲೆಯ ಮೇಲ್ವಿಚಾರಣಾ ಸಿಬ್ಬಂದಿ ಹಾಗೂ ಅಡುಗೆಯವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇಂದು ರಾತ್ರಿ ವಿವಿಧ ರಾಜ್ಯಗಳಿಂದ ರೈಲಿನ ಮುಖಾಂತರ ಸೇಡಂ ತಾಲೂಕಿಗೆ ಸುಮಾರು 300ರಿಂದ 400 ಜನ ಆಗಮಿಸಲಿದ್ದಾರೆ. ಅವರಿಗೆ ಒಂದು ರಾತ್ರಿ ಉಳಿದುಕೊಳ್ಳಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಶಾದಿ ಮಹಲ್ ಬಳಸಿಕೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡಿ ತಿಳಿಸಿದ್ದಾರೆ.

ABOUT THE AUTHOR

...view details