ಕರ್ನಾಟಕ

karnataka

ETV Bharat / state

ಕಲಬುರಗಿಯ 1,251 ವಲಸೆ ಕಾರ್ಮಿಕರು ವಾಪಸ್​​: ಜಿಲ್ಲಾಧಿಕಾರಿ​

ಈಗಾಗಲೇ ಮುಂಬೈನಲ್ಲಿ ಉದ್ಯೋಗ ಅರಸಿ ಹೋಗಿದ್ದ ಕೂಲಿ ಕಾರ್ಮಿಕರನ್ನು ಕಲಬುರಗಿ ಜಿಲ್ಲೆಗೆ ವಾಪಸ್ ಕರೆಸಿಕೊಳ್ಳುಲಾಗಿದೆ. ಉಳಿದವರನ್ನು ಕರೆಸಿಕೊಳ್ಳಲಾಗುತ್ತಿದೆ. ನಾಳೆ ಇನ್ನೊಂದು ರೈಲು ಕಲಬುರಗಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಶರತ್​ ತಿಳಿಸಿದ್ದಾರೆ.

1,251 Migrant Workers Returned to kalaburagi : District Collector Sarath
ಕಲಬುರಗಿಯ 1,251 ವಲಸೆ ಕಾರ್ಮಿಕರು ವಾಪಸ್ಸಾಗಿದ್ದಾರೆ : ಜಿಲ್ಲಾಧಿಕಾರಿ ಶರತ್​​

By

Published : May 12, 2020, 6:51 PM IST

ಕಲಬುರಗಿ: ಇಂದು 1,251 ಜನ ವಲಸೆ ಕಾರ್ಮಿಕರನ್ನು ರೈಲಿನ ಮೂಲಕ ಜಿಲ್ಲೆಗೆ ಕರೆ ತರಲಾಗಿದೆ. ನಾಳೆ ಮತ್ತೊಂದು ರೈಲಿನ ಮೂಲಕ ವಲಸೆ ಕಾರ್ಮಿಕರು ಕಲಬುರಗಿಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಶರತ್​​

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಂಬೈನಲ್ಲಿ ಉದ್ಯೋಗ ಅರಸಿ ಹೋಗಿದ್ದ ಕೂಲಿ ಕಾರ್ಮಿಕರನ್ನು ಜಿಲ್ಲೆಗೆ ವಾಪಸ್ ಕರೆಸಿಕೊಳ್ಳುಲಾಗಿದೆ. ಉಳಿದವರನ್ನು ಕರೆಸಿಕೊಳ್ಳಲಾಗುತ್ತಿದೆ. ನಾಳೆ ಇನ್ನೊಂದು ರೈಲು ಕಲಬುರಗಿಗೆ ಬರಲಿದೆ. ಬಂದಿರುವ ಕಾರ್ಮಿಕರನ್ನು ಮುಂಜಾಗ್ರತಾ ಕ್ರಮದೊಂದಿಗೆ ಕ್ವಾರಂಟೈನ್ ಮಾಡಾಲಾಗಿದೆ.

ಸದ್ಯ ಬಂದವರಿಗೆ ಹಾಸ್ಟೆಲ್, ಕಲ್ಯಾಣ ಮಂಟಪ, ಸರ್ಕಾರಿ ಶಾಲೆಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಗ್ರಾಮದ ಜನರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ಇನ್ನು ಉಳಿದಂತೆ ಜಿಲ್ಲೆಯ ಒಟ್ಟು ಏಳು ಸಾವಿರ ವಲಸೆ ಕಾರ್ಮಿಕರು ಬರಬೇಕಾಗಿದೆ. ಅವರನ್ನು ಕರೆಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಇನ್ನು ಜಿಲ್ಲೆಯಲ್ಲಿರುವ ಬಿಹಾರ ಕಾರ್ಮಿಕರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಪತ್ತೆ ಹಚ್ಚಿ ಅವರನ್ನು ಮುಂದಿನ ದಿನಗಳಲ್ಲಿ ಬಿಹಾರಕ್ಕೆ ಕಳಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details