ಹಾವೇರಿ: ಎಮ್ಮೆಗಳನ್ನು ಹೊಡೆದುಕೊಂಡು ಬರ್ತಿದ್ದ ಯುವಕನ ಜೊತೆ ಪೊಲೀಸರು ಜಟಾಪಟಿ ನಡೆಸಿದ ಘಟನೆ ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ.
ರಸ್ತೆಯಲ್ಲಿ ಎಮ್ಮೆಗಳ ತೆರವುಗೊಳಿಸುವಂತೆ ಲಾಠಿ ಏಟು.. ಪೊಲೀಸರ ವಿರುದ್ಧ ರೊಚ್ಚಿಗೆದ್ದ ಯುವಕ - scold to police for laty charge
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬರುತ್ತಿದ್ದ ಕಾರಣ ರಸ್ತೆಯಲ್ಲಿ ಎಮ್ಮೆಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಪೊಲೀಸರು ತೆರವುಗೊಳಿಸಲು ಹೇಳಿದರು. ಅಲ್ಲದೆ, ತನಗೆ ಲಾಠಿಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಯುವಕ ಆರೋಪಿಸಿ ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದಾನೆ.
ಯುವಕ
ಯುವಕ ಶಿವು ದೇಸೂರು ಎಂಬಾತ ಎಮ್ಮೆಗಳನ್ನು ಹೊಡೆದುಕೊಂಡು ಬರುತ್ತಿದ್ದ. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬರುತ್ತಿದ್ದ ಕಾರಣ ಪೊಲೀಸರು ಶಿವುಗೆ ರಸ್ತೆಯಲ್ಲಿದ್ದ ಎಮ್ಮೆಗಳನ್ನು ತೆರವುಗೊಳಿಸಲು ಹೇಳಿ ಲಾಠಿಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅದೇ ವೇಳೆ ಶಿವು ಕೂಡ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಶಿವು ತಂದೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು.