ಹಾವೇರಿ:ಎತ್ತುಗಳನ್ನು ಮೈತೊಳೆಯಕಲು ಕೆರೆಗೆ ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಬಾಲಕರನ್ನ ಅಭಿಷೇಕ್ (14) ಮತ್ತು ಆತನ ಸಂಬಂಧಿ ಹರೀಶ್ (14) ಎಂದು ಗುರುತಿಸಲಾಗಿದೆ.
ಇಬ್ಬರೂ ಮಂಗಳವಾರ ಮಧ್ಯಾಹ್ನ ಎತ್ತುಗಳ ಮೈತೊಳೆಯಲು ಮಾಸೂರು ರಸ್ತೆಯಲ್ಲಿರುವ ಬಂದಮ್ಮನ ಕೆರೆಗೆ ತೆರಳಿದ್ದರು. ಎತ್ತುಗಳನ್ನು ಮೈತೊಳೆಯುವ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಕೆರೆ ಆಳವಾಗಿದ್ದು ಮತ್ತು ಇಬ್ಬರಿಗೂ ಈಜು ಬಾರದ ಕಾರಣ ನೀರು ಪಾಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಹಕಾರದಿಂದ ಬಾಲಕರ ಮೃತದೇಹ ಹೊರ ತೆಗೆಯಲಾಗಿದೆ.