ಕರ್ನಾಟಕ

karnataka

ETV Bharat / state

ದಂಡಕ್ಕೆ ಯಾರೂ ಹೆದರುತ್ತಿಲ್ಲ, ಇಲ್ಲಿ ರೂಲ್ಸ್​​​ ಫಾಲೋ ಆಗೋದು ಯಾವಾಗ!? - Tribal Riding in Haveri

ಕೇಂದ್ರ ಸರ್ಕಾರ ಜಾರಿಗೆ ತಂದ ಮೋಟಾರು ವಾಹನ ಕಾಯ್ದೆ 2019 ದೇಶದೆಲ್ಲೆಡೆ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಆದರೆ ಈ ಜಿಲ್ಲೆಯಲ್ಲಿ ಈ ಕಾಯ್ದೆ ಯಾವುದೇ ಪರಿಣಾಮ ಬೀರಿಲ್ಲ ಎಂಬಂತೆ ಕಾಣುತ್ತಿದೆ.

ಹಾವೇರಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ

By

Published : Sep 10, 2019, 9:12 PM IST

Updated : Sep 10, 2019, 10:11 PM IST

ಹಾವೇರಿ: ಕೇಂದ್ರ ಸರ್ಕಾರ ಸಂಚಾರಿ ನಿಯಮಗಳನ್ನು ಎಲ್ಲರು ಕಟ್ಟುನಿಟ್ಟಾಗಿ ಪಾಲನೆ ಮಾಡಲಿ ಎಂಬ ಉದ್ದೇಶದಿಂದ ಮೋಟಾರು ವಾಹನ ಕಾಯ್ದೆ 2019 ಜಾರಿಗೆ ತಂದಿದೆ. ಆದ್ರೆ ಏಲಕ್ಕಿ ನಾಡಿನ ಜನಕ್ಕೆ ಇದು ಅನ್ವಯವಾದಂತೆ ಕಾಣುತ್ತಿಲ್ಲ.

ಹೌದು, ಜಿಲ್ಲೆಯಲ್ಲಿ ಶನಿವಾರವೇ ಈ ರೂಲ್ಸ್​ ಜಾರಿಗೆ ತರಲಾಗಿತ್ತು. ಆದರೆ ವಾಹನ ಸವಾರರು ಇದಕ್ಕೆ ಕ್ಯಾರೆ ಎನ್ನದೆ ಎಂದಿನಂತೆ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಾರೆ. ಬೈಕ್​ನಲ್ಲಿ ತ್ರಿಬಲ್​ ರೈಡಿಂಗ್​ ಸೇರಿದಂತೆ ನಗರದ ವಿವಿಧೆಡೆ ಸಂಚಾರಿ ನಿಯಮ ಉಲ್ಲಂಘನೆಯಾಗುತ್ತಿದೆ.

ಹಾವೇರಿಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ

ಈಗಾಗಲೇ ಪೊಲೀಸ್​ ಇಲಾಖೆ ಭಾರಿ ದಂಡ ಕುರಿತಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿತ್ತು. ಆದರೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯಾಗಿಲ್ಲ. ಪೊಲೀಸ್ ಇಲಾಖೆ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮೋಟಾರು ವಾಹನ ಕಾಯ್ದೆ 2019 ಬಗ್ಗೆ ಅರಿವು ಮೂಡಸಬೇಕು ಎನ್ನುತ್ತಿದ್ದಾರೆ ಸಾರ್ವಜನಿಕರು.

Last Updated : Sep 10, 2019, 10:11 PM IST

ABOUT THE AUTHOR

...view details