ಕರ್ನಾಟಕ

karnataka

ETV Bharat / state

ಹಾವೇರಿ : ಓರ್ವ ಆಶಾ ಕಾರ್ಯಕರ್ತೆ ಸೇರಿ ಮೂವರು ಮಹಿಳೆಯರಿಗೆ ಕೊರೊನಾ

ಆಶಾ ಕಾರ್ಯಕರ್ತೆಯರಿಗೆ ನಿಯಮಿತವಾಗಿ ತಪಾಸಣೆ ಮಾಡುವಂತೆ ಆರೋಗ್ಯ ಇಲಾಖೆ ಜೂನ್‌ 19ರಂದು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿತ್ತು. ಇಂದು ಆಶಾ‌ ಕಾರ್ಯಕರ್ತೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಕಾರಡಗಿ ಗ್ರಾಮದ ದೇಸಾಯಿ ಓಣಿಯನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ.

Haveri
ಹಾವೇರಿ‌ಯಲ್ಲಿ ಮೂವರು ಮಹಿಳೆರಿಗೆ ಕೊರೊನಾ

By

Published : Jun 21, 2020, 8:44 PM IST

ಹಾವೇರಿ ‌:ಜಿಲ್ಲೆಯಲ್ಲಿ ಇಂದು ಓರ್ವ ಆಶಾ ಕಾರ್ಯಕರ್ತೆ ಸೇರಿ ಮೂವರು ಮಹಿಳೆಯರಿಗೆ ಕೊರೊನಾ ಸೋಂಕು ತಗುಲಿದೆ.

ಶಿಗ್ಗಾಂವಿಯ ದೇಸಾಯಿ ಗಲ್ಲಿಯ ಕಂಟೇನ್​ಮೆಂಟ್​ ಝೋನ್​ಲ್ಲಿದ್ದ 45 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿದೆ. ಉಳಿದಂತೆ ಎರಡು ಪ್ರಕರಣಗಳ ಪೈಕಿ ಓರ್ವ ಮಹಿಳೆ ಗರ್ಭಿಣಿಯಾಗಿದ್ರೆ, ಮತ್ತೊರ್ವರು ಆಶಾ ಕಾರ್ಯಕರ್ತೆಯಾಗಿದ್ದಾರೆ. ಸವಣೂರು ತಾಲೂಕಿನ ಕಾರಡಗಿ ಗ್ರಾಮದ 38 ವರ್ಷದ P-8700 ಆಶಾ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ. ಇವರು ಕಾರಡಗಿ ಗ್ರಾಮದಲ್ಲಿ ಪತಿಯೊಂದಿಗೆ ವಾಸವಾಗಿದ್ದಾರೆ. ಇವರು ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಆಶಾ ಕಾರ್ಯಕರ್ತೆಯರಿಗೆ ನಿಯಮಿತವಾಗಿ ತಪಾಸಣೆ ಮಾಡುವಂತೆ ಆರೋಗ್ಯ ಇಲಾಖೆ ಜೂನ್‌ 19ರಂದು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿತ್ತು. ಇಂದು ಆಶಾ‌ ಕಾರ್ಯಕರ್ತೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಕಾರಡಗಿ ಗ್ರಾಮದ ದೇಸಾಯಿ ಓಣಿಯನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ.

ಹಾವೇರಿ‌ ಜಿಲ್ಲೆ ಸವಣೂರು ಪಟ್ಟಣದ P-8699, 23 ವರ್ಷದ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ. ಗರ್ಭಿಣಿ ಮಹಿಳೆಯ ಹೆರಿಗೆಗೆಂದು ಸವಣೂರಿನ ತವರು ಮನೆಗೆ ಬಂದಿದ್ದರು. ಜೂನ್‌19 ರಂದು ಇವರ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಪರೀಕ್ಷೆಗೆ ಕಳುಹಿಸಿತ್ತು. ಗರ್ಭಿಣಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಲಾಲಸಾಕಟ್ಟಿ ಖಾದರಬಾಗ್ ಓಣಿಯನ್ನೂ ಕೂಡ ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ. 45 ವರ್ಷದ P-8698 ಮಹಿಳೆ ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿಯ ಕಂಟೇನ್ಮೆಂಟ್ ಝೋನ್‌ನ ನಿವಾಸಿ. P-6832 ಸಂಪರ್ಕದಿಂದ ಈ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ 41 ಕೊರೊನಾ ಪಾಸಿಟಿವ್​ ಕೇಸ್​ಗಳು ದೃಢಪಟ್ಟಿವೆ. 21 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದಂತೆ 20 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details