ಕರ್ನಾಟಕ

karnataka

ETV Bharat / state

ಶ್ರಾವಣ ಮಾಸ : ಪ್ರತಿದಿನವೂ ವಿಶೇಷ ಕಾರ್ಯಕ್ರಮ - ಶ್ರಾವಣ ಮಾಸ

ಶ್ರಾವಣ ಮಾಸ ಬಂದರೆ ಸಾಕು ಮಠ ದೇವಸ್ಥಾನಗಳಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿಠ್ಹಲ್ ಮಂದಿರದಲ್ಲಿ ಜ್ಞಾನೇಶ್ವರ ಮಹಾರಾಜರ ಪಾರಾಯಣ ನಡೆಸಲಾಯಿತು.

Haveri district

By

Published : Aug 17, 2019, 4:39 AM IST

ಹಾವೇರಿ:ಶ್ರಾವಣ ಮಾಸ ಬಂದರೆ ಸಾಕು ಮಠ ದೇವಸ್ಥಾನಗಳಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರ ಅಂಗವಾಗಿ ಜಿಲ್ಲೆಯ ವಿಠ್ಹಲ್ ಮಂದಿರದಲ್ಲಿ ಜ್ಞಾನೇಶ್ವರ ಮಹಾರಾಜರ ಪಾರಾಯಣ ನಡೆಸಲಾಯಿತು.

ವಿಠಲ ಮಂದಿರದಲ್ಲಿ ಪಾರಾಯಣ ಕಾರ್ಯಕ್ರಮ

ಶ್ರಾವಣ ಮಾಸದ ಪ್ರಯುಕ್ತ ದೇವಸ್ಥಾನಲ್ಲಿನ ಪಾಂಡುರಂಗ -ರುಕ್ಷ್ಮಿಣಿ ಮೂರ್ತಿಗಳನ್ನು ವಿಶಿಷ್ಟವಾಗಿ ಅಲಂಕರಿಸಲಾಗಿತ್ತು. ಈ ಸಂಬಂಧ ಮುಂಜಾನೆ, ಮಧ್ಯಾಹ್ನ ಮತ್ತು ಸಂಜೆ ಭಜನೆಯನ್ನ ಆಯೋಜಿಸಲಾಗಿರುತ್ತದೆ. ಶ್ರಾವಣ ಮಾಸದ ಪ್ರತಿದಿನ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದೇ ಆ.30 ರಂದು ನಗರದಲ್ಲಿ ಪಲ್ಲಕ್ಕಿ ಸೇವೆಯನ್ನ ನಡೆಸಲಾಗುತ್ತದೆ. ಪಲ್ಲಕ್ಕಿ ಸೇವೆಯೊಂದಿಗೆ ಪ್ರಸ್ತುತ ವರ್ಷದ ಶ್ರಾವಣಮಾಸದ ಕಾರ್ಯಕ್ರಮಗಳು ಮುಕ್ತಾಯವಾಗುತ್ತದೆ.

ABOUT THE AUTHOR

...view details