ಕರ್ನಾಟಕ

karnataka

ETV Bharat / state

ಬಿಎಸ್​ವೈ ಪಕ್ಕದಲ್ಲಿ ಕೂರಲು ಸವದಿ ಯೋಗ್ಯರಲ್ಲ: ಪದ್ಮನಾಭ ಪ್ರಸನ್ನಕುಮಾರ್ - ಹಾವೇರಿ ಸುದ್ದಿ

ಡಿಸಿಎಂ ಲಕ್ಷ್ಮಣ ಸವದಿ ಅವರು ಸಿಎಂ ಯಡಿಯೂರಪ್ಪರ ಕಾಲಿನ ದೂಳಿಗೆ ಸಮವಿಲ್ಲಾ. ವಿಧಾನಸೌಧದಲ್ಲಿ ಅಶ್ಲೀಲ ಚಿತ್ರ ನೋಡಿದ್ದ ಸವದಿ ಯಡಿಯೂರಪ್ಪರ ಪಕ್ಕದಲ್ಲಿ ಕುಳಿತಕೊಳ್ಳಲು ಸಹ ಯೋಗ್ಯರಲ್ಲ. ಅಂತವರನ್ನ ಯಡಿಯೂರಪ್ಪನವರ ಮಟ್ಟಕ್ಕೆ ಬೆಳೆಸುತ್ತಿರುವುದನ್ನು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಖಂಡಿಸಿದ್ದಾರೆ.

ಅಶ್ಲೀಲ ಚಿತ್ರ ನೋಡಿದ ಸವದಿ ಯಡಿಯೂರಪ್ಪರ ಪಕ್ಕದಲ್ಲಿ ಕುಳಿತಕೊಳ್ಳಲು ಲಾಯಕ್ಕಿಲ್ಲ;ಪದ್ಮನಾಭ ಪ್ರಸನ್ನಕುಮಾರ್

By

Published : Sep 3, 2019, 5:46 PM IST

Updated : Sep 3, 2019, 8:25 PM IST

ಹಾವೇರಿ:ಡಿಸಿಎಂ ಲಕ್ಷ್ಮಣ್​ ಸವದಿ ಯಡಿಯೂರಪ್ಪರ ಕಾಲಿನ ಧೂಳಿಗೆ ಸಮವಿಲ್ಲಾ. ವಿಧಾನಸೌಧದಲ್ಲಿ ಅಶ್ಲೀಲ ಚಿತ್ರ ನೋಡಿದ್ದ ಸವದಿಯವರು ಸಿಎಂ ಯಡಿಯೂರಪ್ಪ ಅವರ ಪಕ್ಕದಲ್ಲಿ ಕುಳಿತಕೊಳ್ಳಲು ಸಹ ಯೋಗ್ಯರಿಲ್ಲ. ಆದ್ರೆ ಅಂತವರನ್ನ ಯಡಿಯೂರಪ್ಪ ಲೇವಲ್‌ಗೆ ಬೆಳೆಸುತ್ತಿರುವುದು ಖಂಡನೀಯ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಹೇಳಿದ್ದಾರೆ.

ಅಶ್ಲೀಲ ಚಿತ್ರ ನೋಡಿದ ಸವದಿ ಯಡಿಯೂರಪ್ಪರ ಪಕ್ಕದಲ್ಲಿ ಕೂರಲು ಯೋಗ್ಯರಲ್ಲ: ಪದ್ಮನಾಭ ಪ್ರಸನ್ನಕುಮಾರ್

ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಇರದಿದ್ದರೇ ದಕ್ಷಿಣ ಭಾರತದಲ್ಲಿ ಬಿಜೆಪಿ ಇರುತ್ತಿತ್ತೋ, ಇಲ್ಲವೊ ಗೊತ್ತಿಲ್ಲ. ಅಂತವರನ್ನ ಈಗ ಸೈಡ್​ಲೈನ್ ಮಾಡಲು ನೋಡುತ್ತಿರುವುದು ಖಂಡನಾರ್ಹ. ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ತುಳಿಯಲಾಗುತ್ತಿದೆ. ಆದ್ರೆ ಬಿಎಸ್​ವೈ ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಇನ್ನು, ನೆರೆ ಹಾವಳಿ ಎದುರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಪ್ರಸನ್ನಕುಮಾರ್ ಆರೋಪಿಸಿದ್ದಾರೆ. ಪ್ರವಾಹ ಪೀಡಿತ ಸ್ಥಳಗಳಿಗೆ ಕೇಂದ್ರ ಸಚಿವರು ಭೇಟಿ ನೀಡಿದ್ದರೂ ಏನು ಲಾಭವಾಗಿಲ್ಲ. ಅದು ಆಯಾರಾಮ್, ಗಯಾರಾಮ ಎನ್ನುವಂತಾಗಿದೆ ಎಂದು ಪದ್ಮನಾಭ ವಾಗ್ದಾಳಿ ನಡೆಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಬಂದರೆ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಆದರೆ ನೆರೆಹಾವಳಿಯಾದ ಈ ಸಂದರ್ಭದಲ್ಲಿ ರಾಜ್ಯಕ್ಕೆ ಭೇಟಿ ನೀಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ನೆರೆ ಹಾವಳಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯೀಕರಣ ಮಾಡಿದ್ದೇ ದೇಶದ ಆರ್ಥಿಕ ಕುಸಿತಕ್ಕೆ ಕಾರಣವೆಂದು ಕೆಜೆಪಿ ಅಧ್ಯಕ್ಷ ಅಭಿಪ್ರಾಯಪಟ್ಟರು.

Last Updated : Sep 3, 2019, 8:25 PM IST

ABOUT THE AUTHOR

...view details