ಹಾವೇರಿ:ತಮಿಳುನಾಡು ಮತ್ತು ಕರ್ನಾಟಕದ ನಡುವೆ ಮೇಕೆದಾಟು ವಿಚಾರದಲ್ಲಿ ಯಾವುದೇ ರೀತಿಯ ಡಿಸ್ಪ್ಯೂಟ್ ಇಲ್ಲ. ಈ ವಿಷಯ ಸುಪ್ರೀಂಕೋರ್ಟ್ನಲ್ಲೇ ತೀರ್ಮಾನ ಆಗಿದೆ. ಸುಪ್ರೀಂಕೋರ್ಟ್ ಬಿಟ್ಟು ಬೇರೆ ಕೋರ್ಟ್ ಇದೆಯಾ? ನಮ್ಮ ನೀರು ನಾವು ಬಳಸಿಕೊಳ್ಳೋಕೆ ದೊಣ್ಣೆ ನಾಯಕನ ಅಪ್ಪಣೆ ಕೇಳಬೇಕಾ ಎಂದು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕೇಂದ್ರದವರು ಮಲತಾಯಿ ಧೋರಣೆ ತೋರುತ್ತಿದ್ದಾರೆ. ಪ್ರಧಾನಿಗೆ ಇದರ ಬಗ್ಗೆ ಪತ್ರ ಬರೆದಿರುವೆ. ಮಾತೆತ್ತಿದ್ರೆ ಡಬಲ್ ಎಂಜಿನ್ ಸರ್ಕಾರ ಅಂತಾರೆ. ಇದು ಡಬಲ್ ಎಂಜಿನ್ ಸರ್ಕಾರ ಅಲ್ಲ. ಡಬ್ಬಾ ಸರ್ಕಾರ. ಇವರೇನೂ ಮಾಡುವುದಿಲ್ಲ. ಎರಡೂವರೆ ವರ್ಷದಿಂದ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ತೆಗೆದುಕೊಳ್ಳಲು ಆಗಿಲ್ಲ. ನಮ್ಮ ಸರ್ಕಾರ ಬಂದ್ರೆ 24 ಗಂಟೆಗಳಲ್ಲಿ ಮಹಾದಾಯಿ ವಿವಾದ ಬಗೆಹರಿಸ್ತೀನಿ ಎಂದು ಮಿಸ್ಟರ್ ಯಡಿಯೂರಪ್ಪ ಹೇಳಿದ್ದರು. ಆದ್ರೆ ಏನನ್ನು ಮಾಡಲಿಲ್ಲ. ಬಿಜೆಪಿಯವರು ಹೇಳುವುದು ಬರೀ ಸುಳ್ಳು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ಧಮ್ ಇಲ್ಲ. ಇದು ಹೇಡಿಗಳ ಸರ್ಕಾರ. ಪ್ರಧಾನಿ ಮುಂದೆ ನಿಂತು ಮಾತನಾಡೋ ಧೈರ್ಯ ಇಲ್ಲ. ಕರ್ನಾಟಕದಿಂದ 3 ಲಕ್ಷ ಕೋಟಿಗೂ ಅಧಿಕ ತೆರಿಗೆ ಹಣ ಸಂಗ್ರಹವಾಗಿದೆ. ಆದ್ರೆ ಅದರಲ್ಲಿ ಶೇ.42ರಷ್ಟು ಕೊಟ್ಟರೆ ನಮಗೆ ಹಣ ಸಿಗುತ್ತದೆ. ಈಗ ಬರಿ ಬರ್ತಿರೋದು 47 ಸಾವಿರ ಕೋಟಿ ಅಷ್ಟೇ. ಅದು ಮುಂದಿನ ವರ್ಷಕ್ಕೆ ಬರುತ್ತದೆ. ಮೋದಿ ಬಂದ ಮೇಲೆ 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇಷ್ಟಾದರೂ ಯಾವುದರ ಬೆಲೆಯೂ ಕಡಿಮೆ ಆಗಲಿಲ್ಲ. ಇಂತವರ ಕೈಯಲ್ಲಿದ್ದರೆ ರಾಜ್ಯ, ದೇಶ ಉಳಿಯುತ್ತಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗಾಂಧೀಜಿ ದಂಡಿಯಾತ್ರೆ ಮಾಡಿದ್ದು, ದೇಶಕ್ಕೆ ಸ್ವಾತಂತ್ರ್ಯ ಬೇಕೆಂದು. ಈಗ ನಾವು ಪಾದಯಾತ್ರೆ ಮಾಡಿದ್ದು ಕುಡಿಯೋ ನೀರಿಗಾಗಿ. ಮಾಜಿ ಸಿಎಂ ಕುಮಾರಸ್ವಾಮಿ ಈ ವಿಚಾರದಲ್ಲಿ ಹತಾಶೆಯಿಂದ ಮಾತನಾಡ್ತಿದ್ದಾರೆ. ಕುಮಾರಸ್ವಾಮಿ ಸುಳ್ಳು ಹೇಳ್ತಾರೆ. ಅದರ ಬಗ್ಗೆ ಮಾತನಾಡೋದಿಲ್ಲ. ಅವರು ಏನು ಹೇಳಿದ್ದಾರೆ, ನೋಡಿ ಮಾತನಾಡುವೆ ಎಂದರು.