ಕರ್ನಾಟಕ

karnataka

ETV Bharat / state

ರಟ್ಟೀಹಳ್ಳಿ ಪ್ರಕರಣ : ಅಲ್ಲಿ ಓಡಾಡಬಾರದು ಎನ್ನಲು ಅದು ಪಾಕಿಸ್ತಾನವಾ..? ಬಿಜೆಪಿ ರಾಜ್ಯಾಧ್ಯಕ್ಷರ ಪ್ರಶ್ನೆ

ಅಕ್ಟೋಬರ್ 11ರಂದು ರಟ್ಟೀಹಳ್ಳಿಯಲ್ಲಿ ಹಲ್ಲೆಗೆ ಒಳಗಾಗಿದ್ದ ಆರ್​ಎಸ್​ಎಸ್​ ಕಾರ್ಯಕರ್ತರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

Nalin Kumar Kateel reaction about Haveri communal issue
ನಳೀನ್ ಕುಮಾರ್ ಕಟೀಲ್​

By

Published : Oct 14, 2022, 5:08 PM IST

Updated : Oct 14, 2022, 5:15 PM IST

ಹಾವೇರಿ :ಪಥಸಂಚಲನದ ಪಥ ಜಾಗ ವೀಕ್ಷಣೆಗೆ ತೆರಳಿದ್ದ ಐವರ ಮೇಲೆ ಮುಸ್ಲಿಂ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಇದೊಂದು ದುರದೃಷ್ಟಕರ ಘಟನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್​ ಬೇಸರ ವ್ಯಕ್ತಪಡಿಸಿದರು.

ಅಲ್ಲಿ ಓಡಾಡ ಬಾರದು ಎನ್ನಲು ಅದು ಪಾಕಿಸ್ತಾನವಾ

ಅಕ್ಟೋಬರ್ 11ರಂದು ರಟ್ಟೀಹಳ್ಳಿಯಲ್ಲಿ ಹಲ್ಲೆಗೆ ಒಳಗಾಗಿದ್ದ ಐವರು ಆರ್​ಎಸ್​ಎಸ್​ ಕಾರ್ಯಕರ್ತರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದ ನಂತರ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಐವರು ಸಜ್ಜನ ವ್ಯಕ್ತಿಗಳು ರಸ್ತೆ ಮೇಲೆ ಹೋಗ್ತಿದ್ದಾಗ ವಿನಾಕಾರಣ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ಇದು ಮೂಲಭೂತವಾದದ ಮಾನಸಿಕತೆ ತೋರಿಸುತ್ತದೆ. ಸಂವಿಧಾನದ ಅನ್ವಯ ಯಾರು ಎಲ್ಲಿ ಬೇಕಾದರೂ ಓಡಾಡ ಬಹದು. ಅದೇನು ಪಾಕಿಸ್ತಾನವಲ್ಲ, ಅಲ್ಲಿಯೂ ಸ್ವಾತಂತ್ರ ಇದೆ ಎಂದು ಹೇಳಿದರು.

ನಮ್ಮ ಸರಕಾರ ಈ ಘಟನೆ ಸಹಿಸೋದಿಲ್ಲ. ಈಗಾಗಲೇ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸ್ಪಂದಿಸಿದ್ದಾರೆ. ಪ್ರಕರಣ ಸಂಬಂಧ ಇಪ್ಪತ್ಮೂರು ಜನರನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದವರು 100 ಜನ ಇದ್ದರು ಎಂದು ಹೇಳಿದ್ದಾರೆ. ಸಿಸಿಟಿವಿ ದೃಶ್ಯಗಳನ್ನಾಧರಿಸಿ ಅಷ್ಟೂ ಜನರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸುಳ್ಳು ಸಿದ್ದರಾಮಣ್ಣ : ಬಿಜೆಪಿ ಸಂಕಲ್ಪ ಯಾತ್ರೆ ಸುಳ್ಳಿನ ಯಾತ್ರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರ ಹುಟ್ಟೇ ಸುಳ್ಳು. ಅವರ ಜೀವನದಲ್ಲಿ ಅವರಷ್ಟು ದೊಡ್ಡ ಸುಳ್ಳುಗಾರ ಇನ್ನೊಬ್ಬರಿಲ್ಲ. ಸಿದ್ದರಾಮಯ್ಯನ ಜೀವಮಾನದಲ್ಲಿ ಸಿದ್ದರಾಮಣ್ಣ ಸತ್ಯ ಯಾವುದು ಹೇಳ್ತಾರೆ ಅಂದರೆ ನಾನು ಸಿದ್ದರಾಮಣ್ಣ ಅನ್ನೋದನ್ನು ಮಾತ್ರ, ಬಾಕಿದೆಲ್ಲ ಸುಳ್ಳು ಹೇಳುತ್ತಾರೆ. ಅವರು ಜೋಡೋ ಯಾತ್ರೆ ಸುಳ್ಳು ಯಾತ್ರೆ ಎಂದು ನಳೀನ್ ಕುಮಾರ್ ಕಟೀಲ್ ಇದೇ ವೇಳೆ ಆರೋಪಿಸಿದರು.

ಇದನ್ನೂ ಓದಿ :ಇಂದು ಕೆಲಕಾಲ ಆಂಧ್ರಪ್ರದೇಶ ಪ್ರವೇಶಿಸಲಿರುವ ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ'

Last Updated : Oct 14, 2022, 5:15 PM IST

ABOUT THE AUTHOR

...view details