ಕರ್ನಾಟಕ

karnataka

ETV Bharat / state

ಹಾಸಿಗೆ ಬಿಟ್ಟು ಮೇಲೇಳದ ಮಗನನ್ನು 10 ವರ್ಷದಿಂದ ಜೋಪಾನ ಮಾಡ್ತಿರುವ ತಾಯಿ.. - ಅಮ್ಮ

10 ವರ್ಷದಿಂದ ಹಾಸಿಗೆ ಬಿಟ್ಟು ಮೇಲೇಳಲಾಗದ ಮಗನ ಸೇವೆಯಲ್ಲಿ ನಿರತರಾಗಿರುವ ಹಾವೇರಿಯ ಪಾರವ್ವ ಸಜ್ಜನಶೆಟ್ಟರ್ ತನ್ನ ಮಗನ ಶಸ್ತ್ರಚಿಕಿತ್ಸೆ ಸಹಾಯಾಸ್ತ ಚಾಚುವಂತೆ ಮನವಿ ಮಾಡಿದ್ದಾರೆ.

mother seeking help for son
ಹಾಸಿಗೆ ಬಿಟ್ಟು ಮೇಲೇಳಲಾಗದ ಮಗನ ಸೇವೆ

By

Published : May 10, 2020, 5:01 PM IST

ಹಾವೇರಿ :ವಿಶ್ವದಲ್ಲಿ ತೀರಿಸಲಾಗದ ಋಣ ಅಂದರೆ ತಾಯಿ. ತನ್ನ ಮಗುವನ್ನ ನವಮಾಸ ಉದರದಲ್ಲಿಟ್ಟು ಪೋಷಿಸುತ್ತಾರೆ. ತನ್ನ ಮಗು ಸ್ವಾವಲಂಬಿಯಾಗುವವರೆಗೂ ಆಸರೆಯಾಗಿರುತ್ತಾಳೆ. ಆದರೆ, ಇಲ್ಲೊಬ್ಬ ತಾಯಿಯಿದ್ದಾಳೆ. ಈ ತಾಯಿ ಕಳೆದ 10 ವರ್ಷದಿಂದ ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತಿದ್ದಾಳೆ. ಬೈಕ್ ಮೇಲಿಂದ ಕೆಳಗೆ ಬಿದ್ದ ಮಗ ಮೇಲೇಳದೆ ಹಾಸಿಗೆ ಹಿಡಿದಿದ್ದಾನೆ. ನರಗಳ ಸ್ವಾಧೀನ ಕಳೆದುಕೊಂಡ ಮಗನಿಗಾಗಿ ಈ ತಾಯಿ ಮನೆ ಹೊಲ ಮಾರಿದ್ದಾಳೆ.

ಹಾಸಿಗೆ ಬಿಟ್ಟು ಮೇಲೇಳಲಾಗದ ಮಗನ ಸೇವೆ..
ಈ ರೀತಿ ಅಳುತ್ತಿರುವ ಈ ತಾಯಿಯ ಹೆಸರು ಪಾರವ್ವ ಸಜ್ಜನಶೆಟ್ಟರ್, ಹಾವೇರಿ ತಾಲೂಕು ಸಂಗೂರಿನವರು. ಈ ತಾಯಿಯ ಅಳುವಿಗೆ ಕಾರಣ ದುಡಿಯುವ ವಯಸ್ಸಿನಲ್ಲಿ ಹಾಸಿಗೆ ಹಿಡಿದು ಮಲಗಿರುವ ಮಗ. ಹೌದು ಈ ತಾಯಿಯ ಒಬ್ಬನೇ ಒಬ್ಬ ಮಗ ಕಳೆದ 10 ವರ್ಷದಿಂದ ಮಲಗಿದ್ದಲ್ಲಿಯೇ ಮಲಗಿದ್ದಾನೆ. 10 ವರ್ಷದ ಹಿಂದೆ ಮಗ ಜಗದೀಶ್ ಬೈಕ್ ಮೇಲೆ ಬಿದ್ದು ಕಾಲುಗಳ ಸ್ವಾಧೀನಕಳೆದುಕೊಂಡಿದ್ದಾನೆ. ಮಗ ಸರಿಯಾಗುತ್ತಾನೆ ಎಂದು ಈ ತಾಯಿ ಇದ್ದಬದ್ದ ಹೊಲ ಮನೆ ಮಾರಿದ್ದಾಳೆ.
ಆದರೆ, ಮಗ ಮಾತ್ರ ಮೇಲೇಳದಿರುವುದು ತಾಯಿಗೆ ನೋವು ತಂದಿದೆ. ತಿಂಗಳಿಗೆ ಐದು ಸಾವಿರ ರೂ. ಮಗನ ಔಷಧಿಗೆ ಖರ್ಚಾಗುತ್ತೆ. ಶಸ್ತ್ರಚಿಕಿತ್ಸೆ ಮಾಡಿದರೆ ಮಗ ಮೊದನಲಿನಂತಾಗುತ್ತಾನೆ. ನಮಗೆ ಅವನ ತಿಂಗಳ ಔಷಧಿ ಖರೀದಿಸಲು ಹಣ ಇಲ್ಲ. ಇನ್ನು, ಶಸ್ತ್ರಚಿಕಿತ್ಸೆಗೆ ಮೂರು ಲಕ್ಷ ಎಲ್ಲಿಂದ ತರೋಣಾ ಅಂತಿದ್ದಾಳೆ ಈ ತಾಯಿ. ಪಾರವ್ವಳ ಪತಿ ದೊಡ್ಡಬಸನಗೌಡ ಸಂಗೂರು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವರು ಸಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತಮಗೆ ಔಷಧಿ ತರಲು ಹುಬ್ಬಳ್ಳಿಗೆ ಹೋದ ದೊಡ್ಡಬಸನಗೌಡನ ಅಲ್ಲಿಯೇ ಲಾಕ್​ಡೌನ್ ಆಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ತಂದೆ ಬೇರೆ ಕಡೆ ಸಿಲುಕಿದ್ದರಿಂದ ದಿನಸಿ ಖಾಲಿಯಾಗಿದೆ.
ಯಾರಾದರೂ ತಮ್ಮ ಕುಟುಂಬಕ್ಕೆ ಸಹಾಯ ಸಲ್ಲಿಸುವಂತೆ ಜಗದೀಶ್ ಮನವಿ ಮಾಡಿದ್ದಾನೆ. ಜಗದೀಶನ ಈ ಸ್ಥಿತಿ ನೋಡಿ ಇದ್ದಬದ್ದ ಸಂಬಂಧಿಕರು ದೂರಾಗಿದ್ದಾರೆ. ಜಗದೀಶ 10 ವರ್ಷದಿಂದ ಹಾಸಿಗೆ ಬಿಟ್ಟು ಮೇಲೆದ್ದಿಲ್ಲ. 10 ವರ್ಷದಿಂದ ಜಗದೀಶ್‌ ತಾಯಿ ಮಗ ಮಲಗಿದ್ದಲ್ಲಿಯೇ ಎಲ್ಲ ನಿತ್ಯ ಕರ್ಮಗಳನ್ನು ಪೂರೈಸುತ್ತಿದ್ದಾರೆ.
ಆದರೆ, ತನ್ನ ಮಗ ಮೊದಲಿನಂತಾಗಬೇಕು ಎಲ್ಲರಂತೆ ಸ್ವಾವಲಂಬಿಯಾಗಬೇಕು ಎನ್ನುವುದು ಈ ತಾಯಿಯ ಮಹದಾಸೆ. ಆದರೆ, ತಾಯಿಯ ಆಸೆ ಈಡೇರಲು ಸರ್ಕಾರ ಸಂಘ-ಸಂಸ್ಥೆಗಳು ಮುಂದೆ ಬರಬೇಕಿದೆ. ಸಹಾಯ ಹಸ್ತ ಚಾಚುವ ಮೂಲಕ ಜಗದೀಶನ ಶಸ್ತ್ರಚಿಕಿತ್ಸೆಯಾಗಿ ನೆರವಾಗಬೇಕಿದೆ. CONTACT NO9380850014 7483403690 BANK DETAILESPARAVVA.SAJJANGRAMEENA VIKAS BANKIFSC KVGB00072080A/C - 89034239017

ABOUT THE AUTHOR

...view details