ಹಾವೇರಿ : ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಮಕರ ಸಂಕ್ರಾಂತಿ ಆಚರಿಸಲಾಯಿತು. ಶನಿವಾರ ಮುಂಜಾನೆಯಿಂದಲೇ ನದಿಗಳಿಗೆ ತೆರಳಿದ ಜನರು ನೀರಿನಲ್ಲಿ ಮಿಂದೆದ್ದರು. ಸ್ನಾನ ಮಾಡಿ, ಪರಸ್ಪರ ಎಳ್ಳುಬೆಲ್ಲ ಹಚ್ಚಿಕೊಂಡರು. ನಂತರ ಗಂಗಾದೇವಿಗೆ ಪೂಜೆ ಸಲ್ಲಿಸಿದರು.
ವೀಕೆಂಡ್ ಕರ್ಫ್ಯೂ ನಡುವೆಯೂ ಸಹ ನದಿಮೂಲಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಮಕರ ಸಂಕ್ರಾಂತಿಯಲ್ಲಿ ಪಾಲ್ಗೊಂಡಿದ್ದರು. ಹಾನಗಲ್ ತಾಲೂಕಿನ ಕೂಡಲದಲ್ಲಿ ಭಕ್ತರು ತಂಡೋಪತಂಡವಾಗಿ ಬಂದು ಸಂಕ್ರಾಂತಿ ಸಡಗರದಲ್ಲಿ ಮುಳುಗಿದ್ದರು. ವರದಾ ಮತ್ತು ಧರ್ಮಾ ನದಿಗಳ ಸಂಗಮದಲ್ಲಿ ಪೂಜೆ ನೆರವೇರಿಸಿದರು. ಸಂಗಮ ಸ್ಥಳದಲ್ಲಿ ಸ್ನಾನ ಮಾಡಿದ ಜನರು ನಂತರ ಗಂಗಾದೇವಿಗೆ ಪೂಜೆ ಸಲ್ಲಿಸಿದರು. ನಂತರ ಸಹ ಪಂಕ್ತಿ ಭೋಜನ ಸವಿದರು. ಕೂಡಲದ ಗುರುನಂಜೇಶ್ವರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು.