ಹಾವೇರಿ: ಮರಿಕಲ್ಯಾಣ ಅಥವಾ ಎರಡನೇ ಕಲ್ಯಾಣ ಎಂದು ಕರೆಸಿಕೊಳ್ಳುವ ಹಾವೇರಿ ಜಿಲ್ಲೆ ಹಲವು ಮಠಗಳನ್ನು ಹೊಂದಿದೆ. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ 63 ಮಠಗಳಿದ್ದರೆ ಜಿಲ್ಲೆಯ ವಿವಿಧೆಡೆ ವಿಶೇಷ ಮಠಗಳಿವೆ. ಅಂತಹ ಮಠಗಳಲ್ಲೊಂದು ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ರಂಭಾಪುರಿಮಠ.
ಅಪರೂಪದ ಸ್ಫಟಿಕ ಶಿವಲಿಂಗವಿರುವ ವಿಶಿಷ್ಟ ಮಠ: ಸರ್ಕಾರಿ ಹುದ್ದೆಯನ್ನೂ ನಿಭಾಯಿಸ್ತಾರೆ ಪೀಠಾಧಿಪತಿ - ಮಠದ ಪೀಠಾಧಿಪತಿಗಳು ಸರ್ಕಾರಿ ನೌಕರರು ಸುದ್ದಿ
ಈ ಮಠದಲ್ಲಿ 1,001 ಶಿವಲಿಂಗಗಳಿವೆ. ಅಷ್ಟೇ ಅಲ್ಲ, ದೇಶದ ವಿವಿಧೆಡೆ ಇರುವ 12 ಜ್ಯೋತಿರ್ಲಿಂಗಗಳು ಇಲ್ಲಿದ್ದು, 18 ಶಕ್ತಿದೇವತೆಗಳು ಈ ಮಠದ ಕಂಬಗಳ ಮೇಲೆ ಅನಾವರಣಗೊಂಡಿವೆ.
ಈ ಮಠದಲ್ಲಿ ಸಾವಿರದ ಒಂದು ಶಿವಲಿಂಗಗಳಿವೆ. ಜೊತೆಗೆ, ದೇಶದ ವಿವಿಧೆಡೆ ಇರುವ 12 ಜ್ಯೋತಿರ್ಲಿಂಗಗಳನ್ನೂ ಇಲ್ಲಿ ಸ್ಥಾಪಿಸಲಾಗಿದೆ. ದೇಶದಲ್ಲಿರುವ 18 ಶಕ್ತಿದೇವತೆಗಳು ಈ ಮಠದ ಕಂಬಗಳ ಮೇಲೆ ಅನಾವರಣಗೊಂಡಿವೆ. ದಕ್ಷಿಣ ಭಾರತದಲ್ಲೇ ಅಪರೂಪ ಎನ್ನಿಸುವ ಸ್ಫಟಿಕ ಶಿವಲಿಂಗ ಇಲ್ಲಿದೆ. ಈ ಮಠದ ವೈಶಿಷ್ಟ್ಯವೆಂದರೆ ಇಲ್ಲಿಯ ಪೀಠಾಧಿಪತಿಗಳು ಸರ್ಕಾರಿ ನೌಕರರು ಕೂಡಾ ಹೌದು. ಹೆಸ್ಕಾಂನಲ್ಲಿ ಕಾರ್ಯನಿರ್ವಹಿಸುವ ಇವರು ತಮ್ಮ ವೇತನವನ್ನೂ ಸಹ ಮಠಕ್ಕೆ ನೀಡುತ್ತಾರೆ. ಮಠ ಮತ್ತು ಸರ್ಕಾರಿ ಹುದ್ದೆ ಎರಡನ್ನೂ ಇವರು ನಿಭಾಯಿಸುತ್ತಾರೆ.
ಪ್ರಸ್ತುತ ಮಠಾಧೀಶ ವೀರಭದ್ರೇಶ್ವರ ಸ್ವಾಮೀಜಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಯುವಕರನ್ನು ದುಶ್ಚಟಗಳಿಂದ ಮುಕ್ತಿಗೊಳಿಸಿ ಸದ್ಗುಣಗಳ ದೀಕ್ಷೆ ನೀಡಿದ್ದಾರೆ. ತಮ್ಮ ವೇತನದ ಹಣವನ್ನು ಮಠಕ್ಕೆ ನೀಡುವ ಮೂಲಕ ಭಕ್ತರ ದಾನಕ್ಕೆ ಪ್ರೇರಣೆಯಾಗಿದ್ದಾರೆ.