ಕರ್ನಾಟಕ

karnataka

ETV Bharat / state

2ಎ ಮೀಸಲಾತಿಗೆ ಅಂತಿಮ ಗಡುವು ನೀಡಿದ ಪಂಚಮಸಾಲಿ ಕೂಡಲಸಂಗಮ ಶ್ರೀ - ETV Bharat Kannada

ಸಿಎಂ ಅವರ ಮೇಲೆ ನಂಬಿಕೆ, ವಿಶ್ವಾಸವಿಟ್ಟು ನಾಲ್ಕು ಬಾರಿ ಚಳುವಳಿ ಮುಂದೆ ಹಾಕಿದ್ದೇವೆ. ಆದರೆ ಈ ಬಾರಿ ಹಾಗಲ್ಲ ಮಲೇಗೌಡ, ಗೌಡ ಲಿಂಗಾಯತ, ಪಂಚಮಸಾಲಿ ಸಮಾಜ ಸೇರಿದಂತೆ ಎಲ್ಲರೂ ಸೇರಿ‌ ಬಹುದೊಡ್ಡ ಹೋರಾಟ ಮಾಡುತ್ತೇವೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.

Basava Jayamrityunjaya Shri
ಬಸವ ಜಯಮೃತ್ಯುಂಜಯ ಶ್ರೀ

By

Published : Aug 23, 2022, 7:57 PM IST

ಹಾವೇರಿ: ಪಂಚಮಸಾಲಿ ಕೂಡಲಸಂಗಮ ಶ್ರೀಗಳು 2ಎ ಮೀಸಲಾತಿಗೆ ಅಂತಿಮ ಗಡುವು ನೀಡಿದ್ದು, ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು ಸೆಪ್ಟೆಂಬರ್ 26 ರೊಳಗೆ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ 26 ರಂದು ಸಿಎಂ‌ ನಿವಾಸದ ಮುಂದೆ ಸತ್ಯಾಗ್ರಹ ಮಾಡುತ್ತೇವೆ. ಇದೇನಿದ್ದರು ಅಂತಿಮ ಹೋರಾಟ ಎಂದು ಎಚ್ಚರಿಕೆ ನೀಡಿದ್ದಾರೆ.

ಅಕ್ಟೋಬರ್ 23ರಂದು ಚೆನ್ನಮ್ಮ ಜಯಂತ್ಯೋತ್ಸವದ ದಿನ ವಿಧಾನಸೌದದ ಮುಂಭಾಗದಲ್ಲಿ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡುತ್ತೇವೆ. ಮಲೇಗೌಡ, ಗೌಡ ಲಿಂಗಾಯತ, ಪಂಚಮಸಾಲಿ ಸಮಾಜ ಸೇರಿದಂತೆ ಎಲ್ಲರೂ ಸೇರಿ‌ ಬಹುದೊಡ್ಡ ಹೋರಾಟ ಮಾಡುತ್ತೇವೆ. ಸೆಪ್ಟೆಂಬರ್ 26 ರಂದು ಹೋರಾಟ‌ ಮಾಡಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಸಿಎಂ ಅವರ ಮೇಲೆ ನಂಬಿಕೆ, ವಿಶ್ವಾಸವಿಟ್ಟು ನಾಲ್ಕು ಬಾರಿ ಚಳವಳಿಯನ್ನು ಮುಂದೆ ಹಾಕಿದ್ದೇವೆ. ಸಿಎಂಗೆ ಮೀಸಲಾತಿ ಕೊಡುವ ಮನಸ್ಸಿದ್ದರೂ, ಮೀಸಲಾತಿ ಕೊಡದಂತೆ ಆಣೆ ಪ್ರಮಾಣದ ಮೂಲಕ ಒತ್ತಡ ಹಾಕ್ತಿದ್ದಾರೆ ಅನ್ನೋದಿದೆ ಎಂದು ಶ್ರೀಗಳು ಆರೋಪಿಸಿದರು.

ಬಸವ ಜಯಮೃತ್ಯುಂಜಯ ಶ್ರೀ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರುು ಮೀಸಲಾತಿ ಕೊಡಿಸುವ ವಿಚಾರವಾಗಿ ಪ್ರಯತ್ನ ಮಾಡುತ್ತಿದ್ದಾರೆ. 2023ರ‌ ಚುನಾವಣೆಯಲ್ಲಿ ಯಾವ ರೀತಿಯ ರಾಜಕೀಯ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವುದನ್ನು ಅಕ್ಟೋಬರ್ 23ರ ಸಮಾವೇಶದಲ್ಲಿ ಘೋಷಣೆ ಮಾಡುತ್ತೇವೆ. ಜನರ ಆಕ್ರೋಶದ ಸಹನೆಯ ಕಟ್ಟೆ ಒಡೆದುಹೋಗಿದೆ. ಸಿಎಂ ಆದಷ್ಟು ಬೇಗನೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಪಂಚಮಸಾಲಿಗೆ ಮೀಸಲಾತಿ ನೀಡುವಲ್ಲಿ ಷಡ್ಯಂತ್ರ ನಡೆಸಲಾಗುತ್ತಿದೆ.. ಜಯಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ

ABOUT THE AUTHOR

...view details