ಕರ್ನಾಟಕ

karnataka

ETV Bharat / state

ಗಾಣದಿಂದ ತೆಗೆದ ಶುದ್ಧ ಶೇಂಗಾ, ಕೊಬ್ಬರಿ ಎಣ್ಣೆಗೆ ಹೆಚ್ಚಿದ ಬೇಡಿಕೆ

ಈ ಮರದ ಎಣ್ಣೆ ಗಾಣಗಳು ಕಡಿಮೆ ಉಷ್ಣಾಂಶದಲ್ಲಿ ಎಣ್ಣೆ ಉತ್ಪಾದಿಸುತ್ತಿವೆ. ಇದರಿಂದಾಗಿ ಎಣ್ಣಿ ಕಡಿಮೆ ಉಷ್ಣಾಂಶದಲ್ಲಿ ತಯಾರಾಗುತ್ತಿದ್ದು ಮೂಲ ಕಾಳಿನಲ್ಲಿರುವ ಪೌಷ್ಠಿಕಾಂಶಗಳು ಎಣ್ಣೆಯಲ್ಲಿ ಸಹ ಕಂಡು ಬರುತ್ತದೆ.

Extraction of oil in Wooden Mill
ಮರದ ಗಾಣದಲ್ಲಿ ಎಣ್ಣೆ ತೆಗೆಯುವುದು

By

Published : Jul 7, 2022, 5:13 PM IST

ಹಾವೇರಿ :ಒಂದು ಕಾಲದಲ್ಲಿ ಕಟ್ಟಿಗೆಯ ಗಾಣದಿಂದ ಶೇಂಗಾ, ಕುಸುಬಿ, ಕೊಬ್ಬರಿ ಸೇರಿದಂತೆ ವಿವಿಧ ಕಾಳುಗಳಿಂದ ಎಣ್ಣೆ ತೆಗೆದು ಬಳಸುತ್ತಿದ್ದ ಕಾಲವಿತ್ತು. ಕ್ರಮೇಣ ಅವುಗಳು ಮರೆಗೆ ಸರಿದು ಆ ಜಾಗವನ್ನು ಎಣ್ಣೆ ಮಿಲ್​ಗಳು ಆಕ್ರಮಿಸಿಕೊಂಡಿದ್ದವು. ಆದರೆ, ಇದೀಗ ಆರೋಗ್ಯದ ದೃಷ್ಟಿಯಿಂದ ಮತ್ತೆ ಗಾಣದಿಂದ ತೆಗೆದ ಶುದ್ಧ ಕೊಬ್ಬರಿ, ಶೇಂಗಾ ಎಣ್ಣೆಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಎತ್ತುಗಳಿದ್ದ ಜಾಗಕ್ಕೆ ವಿದ್ಯುತ್​ ಬಳಕೆಯ ಮರದ ಗಾಣಗಳು ಬಂದಿವೆ.

ವಿದ್ಯುತ್​ ಬಳಕೆಯ ಮರದ ಗಾಣಗಳಿಂದ ಶುದ್ದ ಎಣ್ಣೆ ತೆಗೆಯುವುದು

ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಇದೀಗ ವಿದ್ಯುತ್ ಬಳಕೆಯ ಮರದ ಗಾಣಗಳು ಶುದ್ದ ಶೇಂಗಾ ಕೊಬ್ಬರಿ ಮತ್ತು ಕುಸುಬಿ ಎಣ್ಣೆ ಉತ್ಪಾದಿಸುತ್ತಿವೆ. ಈ ಮರದ ಎಣ್ಣೆ ಗಾಣಗಳು ಕಡಿಮೆ ಉಷ್ಣಾಂಶದಲ್ಲಿ ಎಣ್ಣೆ ಉತ್ಪಾದಿಸುತ್ತಿವೆ. ಇದರಿಂದಾಗಿ ಎಣ್ಣಿ ಕಡಿಮೆ ಉಷ್ಣಾಂಶದಲ್ಲಿ ತಯಾರಾಗುತ್ತಿದ್ದು ಮೂಲ ಕಾಳಿನಲ್ಲಿರುವ ಪೌಷ್ಠಿಕಾಂಶಗಳು ಎಣ್ಣೆಯಲ್ಲಿ ಸಹ ಕಂಡು ಬರುತ್ತದೆ. ಎರಡು ಕೆಜಿ ಕೊಬ್ಬರಿಯಿಂದ ಒಂದು ಕೆಜಿ ಕೊಬ್ಬರಿ ಎಣ್ಣೆ, ಮೂರು ಕೆಜಿ ಶೇಂಗಾದಿಂದ ಒಂದು ಕೆಜಿ ಎಣ್ಣೆ ತಗೆಯಲಾಗುತ್ತದೆ.

ಗ್ರಾಹಕರು ತಾವು ಬೆಳೆದ ಒಣ ಕೊಬ್ಬರಿ, ಶೇಂಗಾ ಬೀಜ ತಂದು ಇಲ್ಲಿ ಎಣ್ಣೆ ಮಾಡಿಸಬಹುದು. ಬೇಡವಾದರೆ ಗಾಣದವರೇ ತಯಾರಿಸಿದ ಎಣ್ಣೆಯನ್ನ ದುಡ್ಡು ನೀಡಿ ಖರೀದಿ ಮಾಡಬಹುದು. 280 ರೂಪಾಯಿಗೆ ಒಂದು ಕೆಜಿ ಶೇಂಗಾ ಎಣ್ಣೆ, 380 ರೂ.ಗೆ ಒಂದು ಕೆಜಿ ಕೊಬ್ಬರಿ ಎಣ್ಣೆ ಮಾರಾಟವಾಗುತ್ತದೆ. ಈ ಎಣ್ಣೆ ಬಳಕೆಯಿಂದ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ಗಾಣದ ಮಾಲೀಕರು.

ಜಂಜಾಟದ ಜೀವನದಲ್ಲಿ ಒತ್ತಡದಿಂದ ಬರುವ ಅಧಿಕ ರಕ್ತದೊತ್ತಡ, ಮಧುಮೇಹ ಸಂಧಿನೋವು ಸೇರಿದಂತೆ ವಿವಿಧ ರೋಗಗಳು ಇದರ ಬಳಕೆಯಿಂದ ದೂರವಾಗಿವೆ ಎನ್ನುತ್ತಾರೆ ಗ್ರಾಹಕರು. ಜೊತೆಗೆ ಈ ಎಣ್ಣೆಯಿಂದ ತಯಾರಿಸುವ ಆಹಾರ ರುಚಿಯಾಗಿರುತ್ತದೆ. ಮಾರುಕಟ್ಟೆಗೆ ಹೋಲಿಸಿದರೇ ಬೆಲೆ ಹೆಚ್ಚಾದರೂ, ಸಹ ಒಮ್ಮೆ ಈ ರೀತಿಯ ಗಾಣದ ಎಣ್ಣೆ ಬಳಸಲು ಮುಂದಾದರೆ ಸಾಕು, ಕಲಬೆರಕೆ ಎಣ್ಣೆಗಳ ಬಳಕೆಗೆ ಗ್ರಾಹಕರು ಗುಡ್ ಬೈ ಹೇಳುತ್ತಾರೆ ಎನ್ನುತ್ತಾರೆ ಗಾಣದ ಮಾಲೀಕರು.

ಸುಮಾರು 3 ಲಕ್ಷದಿಂದ ಗಾಣಗಳನ್ನು ಆರಂಭಿಸಬಹುದಾಗಿದ್ದು, ಹಲವು ನಿರುದ್ಯೋಗಿಗಳು ಗಾಣ ಹಾಕಲು ಮುಂದೆ ಬರುತ್ತಿದ್ದಾರೆ. ಹಾವೇರಿ ಜಿಲ್ಲೆಯಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಶುದ್ದ ಶೇಂಗಾ ಎಣ್ಣಿಯ ಬಾಟಲ್‌ಗಳು ಇಲ್ಲಿಂದ ಪೂರೈಕೆಯಾಗುತ್ತವೆ.

ಇದನ್ನೂ ಓದಿ :ಅಡುಗೆ ಎಣ್ಣೆ ದರದಲ್ಲಿ ಕುಸಿತ: ಪ್ರಮುಖ ಬ್ರಾಂಡ್​ಗಳ ಬೆಲೆ 10-15 ರೂ. ಕಡಿತ

ABOUT THE AUTHOR

...view details