ಕರ್ನಾಟಕ

karnataka

ETV Bharat / state

ನರೇಗಾ ಯೋಜನೆಯಡಿ 34 ಲಕ್ಷ ಮಾನವ ದಿನಗಳ ಸೃಷ್ಟಿ: ಹಾವೇರಿ ಜಿಪಂ ಸಿಇಒ

ಹಾವೇರಿ ಜಿಲ್ಲೆಯಲ್ಲಿ 2.26 ಲಕ್ಷ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್​​​, 5.36 ಲಕ್ಷ ಕಾರ್ಮಿಕರಿಗೆ ಕೆಲಸ ಕಲ್ಪಿಸಲಾಗಿದ್ದು, ದಿನಕ್ಕೆ ₹275 ಕೂಲಿ ನೀಡಲಾಗಿದೆ ಎಂದು ಜಿಪಂ ಸಿಇಒ ರಮೇಶ್ ದೇಸಾಯಿ ಹೇಳಿದ್ದಾರೆ.

Narega project
ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರು

By

Published : Dec 7, 2020, 10:31 PM IST

ಹಾವೇರಿ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಪಂಚಾಯಿತಿ 37 ಲಕ್ಷ ಗುರಿ ಪೈಕಿ 34 ಲಕ್ಷ ಮಾನವ ದಿನಗಳನ್ನು ಸೃಜಿಸಿದೆ. ಡಿಸೆಂಬರ್ ಅಂತ್ಯದೊಳಗೆ ಉಳಿದ ಗುರಿ ಮುಟ್ಟುತ್ತೇವೆ ಎಂದು ಜಿಪಂ ಸಿಇಒ ರಮೇಶ್ ದೇಸಾಯಿ ತಿಳಿಸಿದ್ದಾರೆ.

ಇದನ್ನೂ ಓದಿ...ಪ್ರತ್ಯೇಕ ಪ್ರಕರಣ: 4 ಕಂಟ್ರಿ ಪಿಸ್ತೂಲ್, 13 ಜೀವಂತ ಗುಂಡು ವಶ

ಜಿಲ್ಲೆಯಲ್ಲಿ ನರೇಗಾ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ಕಾರ್ಮಿಕರಿಗೂ ಕೆಲಸ ನೀಡಲಾಗಿದೆ. 2.26 ಲಕ್ಷ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್​​​, 5.36 ಲಕ್ಷ ಕಾರ್ಮಿಕರಿಗೆ ಕೆಲಸ ಕಲ್ಪಿಸಲಾಗಿದ್ದು, ದಿನಕ್ಕೆ ₹275 ಕೂಲಿ ನೀಡಲಾಗಿದೆ. ಕೆರೆಗಳಲ್ಲಿ ಹೂಳೆತ್ತುವುದು, ಹೊಂಡ ತೆಗೆಯಲು, ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಹಲವು ಕೆಲಸಗಳಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ ಎಂದರು.

ಜಿಪಂ ಸಿಇಒ ರಮೇಶ್ ದೇಸಾಯಿ

ಜಿಲ್ಲೆಯ 8 ತಾಲೂಕುಗಳ 223 ಗ್ರಾಮ ಪಂಚಾಯಿತಿ‌ಗಳಲ್ಲಿ ನರೇಗಾ ಯೋಜನೆ ಕೈಗೊಳ್ಳಲಾಗಿದೆ. 1.32 ಲಕ್ಷ ಕಾರ್ಡ್​​ಗಳು ಚಾಲನೆಯಲ್ಲಿವೆ. 2.80 ಲಕ್ಷ ಕಾರ್ಮಿಕರು ಉದ್ಯೋಗ ಪಡೆದುಕೊಂಡಿದ್ದಾರೆ. ಶೇ. 14.43ರಷ್ಟು ಪರಿಶಿಷ್ಟ ಜಾತಿ, ಶೇ. 11.27ರಷ್ಟು ಪರಿಶಿಷ್ಟ ಪಂಗಡದ ಜನರಿಗೆ ಉದ್ಯೋಗ ನೀಡಲಾಗಿದೆ. ಸುಮಾರು 5,295 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details